ಕರ್ನಾಟಕ-ತ್ರಿಪುರಾ ಪ್ರಾಣಿ ಸಂಗ್ರಹಾಲಯಗಳ ನಡುವೆ ಪ್ರಾಣಿ ವಿನಿಮಯ

ತ್ರಿಪುರಾದ ಸೇಪಾಹಿಜಾಲ ಪ್ರಾಣಿ ಸಂಗ್ರಹಾಲಯ ಹಾಗೂ ಕರ್ನಾಟಕದ ಬನ್ನೇರಘಟ್ಟದ ರಾಷ್ಟ್ರೀಯ ಉದ್ಯಾನವನ ಶೀಘ್ರದಲ್ಲೆ ಪ್ರಾಣಿಗಳನ್ನು ಬದಲಾಯಿಕೊಳ್ಳಲಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಗರ್ತಲಾ: ತ್ರಿಪುರಾದ ಸೇಪಾಹಿಜಾಲ ಪ್ರಾಣಿ ಸಂಗ್ರಹಾಲಯ ಹಾಗೂ ಕರ್ನಾಟಕದ ಬನ್ನೇರಘಟ್ಟದ ರಾಷ್ಟ್ರೀಯ ಉದ್ಯಾನವನ ಶೀಘ್ರದಲ್ಲೆ ಪ್ರಾಣಿಗಳನ್ನು ಬದಲಾಯಿಕೊಳ್ಳಲಿವೆ ಎಂದು ತ್ರಿಪುರಾ ಅರಣ್ಯ ಸಚಿವ ನರೇಶ್ ಜಮಾತಿಯಾ ತಿಳಿಸಿದ್ದಾರೆ.

"ಒಪ್ಪಂದದ ಪ್ರಕಾರ ಬನ್ನೇರಘಟ್ಟ ಪ್ರಾಣಿ ಸಂಗ್ರಹಾಲಯ ಎರಡು ಸಿಂಹಗಳನ್ನು, ಮೂರು ಕೃಷ್ಣಮೃಗಗಳು, ಎರಡು ಸಾಂಬಾರ್ ಜಿಂಕೆಗಳು, ಮತ್ತು ಎರಡು ಮುಳ್ಳಂದಿಗಳನ್ನು ನೀಡಲಿದೆ" ಎಂದು ಅರಣ್ಯ ಸಚಿವ ಸೋಮವಾರ ರಾತ್ರಿ ವರದಿಗಾರರಿಗೆ ತಿಳಿಸಿದ್ದಾರೆ.

ಇದಕ್ಕೆ ಬದಲಾಗಿ ಸೇಪಾಹಿಜಾಲ ಪ್ರಾಣಿ ಸಂಗ್ರಹಾಲಯ ಮೂರು ಲಂಗೂರ್ ಗಳು, ಮೂರು ಹಂದಿ ಬಾಲದ ಮಕ್ಯಾಕ್ ಗಳು ಮತ್ತು ಎರಡು ಹಿಮಾಲಯ ಕಪ್ಪು ಕರಡಿಗಳನ್ನು ಬನ್ನೇರಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ನೀಡಲಿದೆ.

ಕರ್ನಾಟಕದ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಪ್ರಾಣಿ ಸಂಗ್ರಹಾಲಯವನ್ನು ೧೯೭೧ ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com