ರಾಜಸ್ತಾನದಲ್ಲಿ ಕೊಳವೆ ಬಾವಿಗೆ ಬಿದ್ದ 7 ವರ್ಷದ ಬಾಲಕಿ

ಆಟವಾಡುವ ಸಮಯದಲ್ಲಿ ಆಯತಪ್ಪಿ 7 ವರ್ಷದ ಬಾಲಕಿ 450 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ರಾಜಸ್ತಾನದ ಸಿಕಾರ್ ಪ್ರದೇಶದಲ್ಲಿ ನಡೆದಿದೆ.
ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್
Updated on

ರಾಜಸ್ತಾನ: ಆಟವಾಡುವ ಸಮಯದಲ್ಲಿ ಆಯತಪ್ಪಿ 7 ವರ್ಷದ ಬಾಲಕಿ 450 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ರಾಜಸ್ತಾನದ ಸಿಕಾರ್ ಪ್ರದೇಶದಲ್ಲಿ ನಡೆದಿದೆ.

ಆಟವಾಡುತ್ತಾ ಓಡಿ ಬಂದ ಬಾಲಕಿ ತೆರದಿದ್ದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ.  ಸುಮಾರು 30 ಅಡಿ ಆಳದಲ್ಲಿ ಬಾಲಕಿ ಸಿಲುಕಿಕೊಂಡಿದ್ದಾಳೆ ಎನ್ನಲಾಗಿದೆ. ಇನ್ನು ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ 35 ಸದಸ್ಯರು ಘಟನಾ ಸ್ಥಳಕ್ಕೆ ಜೈಪುರದಿಂದ ಹೊರಟಿದ್ದಾರೆ. ಘಟನಾ ಸ್ಥಳ ತಲುಪಿದ ಕೂಡಲೇ ರಕ್ಷಣಾ ಕಾರ್ಯ ಆರಂಭಿಸುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com