
ಶಿಲ್ಲಾಂಗ್: ಭಾರತೀಯ ಸೇನೆ ಹಾಗೂ ಮೇಘಾಲಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎ.ಎಂ.ಇ.ಎಫ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಅಸ್ಸಾಂ- ಮೇಘಾಲಯ ಗಡಿಯಲ್ಲಿರುವ ಉತ್ತರ ಗಾರೋ ಹಿಲ್ಸ್ ನಲ್ಲಿ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರನ್ನು ಹತ್ಯೆ ಮಾಡಿರುವ ಸೇನಾಪಡೆ, ಎರಡು ಪಿಸ್ತೂಲ್, ಮದ್ದುಗುಂಡುಗಳನ್ನು ಇಟ್ಟಿದ್ದ ಎರಡು ಪೆಟ್ಟಿಗೆ ಹಾಗೂ ಒಂದು ಬ್ಯಾಗ್ ನ್ನು ವಶಪಡಿಸಿಕೊಂಡಿದೆ.
ಗಾರೋ ಹಿಲ್ಸ್ ನಲ್ಲಿ ನಡೆದ ಸೇನಾಪಡೆಯ ಯಶಸ್ವಿ ಕಾರ್ಯಾಚರಣೆಗೆ ಬಿಜೆಪಿ ಶ್ಲಾಘಿಸಿದೆ. ಸೇನಾ ಪಡೆಯ ಪ್ರತಿಯೊಂದು ಯಶಸ್ವಿ ಕಾರ್ಯಾಚರಣೆಯೂ ಶ್ಲಾಘನೆಗೆ ಅರ್ಹವಾದದ್ದೇ ಎಂದು ಬಿಜೆಪಿ ವಕ್ತಾರ ಜಿವಿಲ್ ನರಸಿಂಹ ರಾವ್ ಹೇಳಿದ್ದಾರೆ.
Advertisement