1965ರ ಯುದ್ಧ ಗೆದ್ದ ಸಂಭ್ರಮಕ್ಕೆ ಪಾಕ್ ಸರ್ಕಾರ ಆಕ್ಷೇಪ

ಪಾಕಿಸ್ತಾನದ ವಿರುದ್ಧ 1965ರ ಯುದ್ಧದಲ್ಲಿನ ಐತಿಹಾಸಿಕ ಗೆಲುವಿಗೆ ಮುಂದಿನ ತಿಂಗಳು 50 ವರ್ಷ ತುಂಬಲಿರುವ ಸಂಭ್ರಮವನ್ನು ಕೇಂದ್ರ ಸರ್ಕಾರವು ಹಬ್ಬದ ರೀತಿಯಲ್ಲಿ...
ಇಂಡೋ-ಪಾಕ್ ಯುದ್ಧ
ಇಂಡೋ-ಪಾಕ್ ಯುದ್ಧ

ನವದೆಹಲಿ: ಪಾಕಿಸ್ತಾನದ ವಿರುದ್ಧ 1965ರ ಯುದ್ಧದಲ್ಲಿನ ಐತಿಹಾಸಿಕ ಗೆಲುವಿಗೆ ಮುಂದಿನ ತಿಂಗಳು 50 ವರ್ಷ ತುಂಬಲಿರುವ ಸಂಭ್ರಮವನ್ನು ಕೇಂದ್ರ ಸರ್ಕಾರವು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆ. ಕೇಂದ್ರದ ಈ ನಡೆ ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

ಭಾರತವು ಯಾವುದೇ ಯುದ್ಧದಲ್ಲಿನ ಜಯದ ಸಂಭ್ರಮವನ್ನು ಈ ರೀತಿ ಆಚರಿಸಿಕೊಂಡಿಲ್ಲ. 1971ರಲ್ಲಿ 80 ಸಾವಿರ ಪಾಕಿಸ್ತಾನಿ ಸೈನಿಕರು ಭಾರತಕ್ಕೆ ಶರಣಾದರೂ ಭಾರತ ಸಂಭ್ರಮಾಚರಿಸಿಲ್ಲ. ಆದರೆ, ಇದೇ ಮೊದಲ ಬಾರಿಗೆ 50 ವರ್ಷಗಳ ಹಿಂದಿನ ಐತಿಹಾಸಿಕ ಗೆಲುವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆ. ಅದಕ್ಕಾಗಿ ಆ.28ರಿಂದ ಸೆ.26ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ.

ಇದೇ ವೇಳೆ, ಸೈನಿಕರ ಗೌರವಾರ್ಥ ಕೇಂದ್ರ ಸರ್ಕಾರ ರು. 350 ಕೋಟಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಭಾರತದ ಈ ನಡೆಗೆ ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ, ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com