ತಮಿಳುನಾಡು ಸಿಎಂ ಜಯಲಲಿತಾಗೆ ಭರ್ಜರಿ ಗೆಲವಿನ ಸಂಭ್ರಮ. ತಮಿಳುನಾಡಿನ ಆರ್.ಕೆ.ನಗರ ಉಪಚುನಾವಣೆ ಯಲ್ಲಿ ಜಯಲಲಿತಾ ಅವರು 1,50,722 ಮತಗಳ ಅಂತರದಿಂದ ಜಯಸಾ„ಸಿದ್ದಾರೆ. ಇತರೆ ಅಭ್ಯರ್ಥಿಗಳಂತೆ ಜಯಾ ಅವರ ಪ್ರತಿಸ್ಪರ್ಧಿ ಸಿಪಿಐನ ಸಿ. ಮಹೇಂದ್ರನ್ ಠೇವಣಿ ಕಳೆದುಕೊಂಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾತನಾಡಿದ ಜಯಾ, ``ಇದೊಂದು ಐತಿಹಾಸಿಕ ಗೆಲವು. ಮತದಾರರ ನಿರೀಕ್ಷೆ, ಅಗತ್ಯಗಳನ್ನು ಪೂರೈಸಲು ಅವಿರತವಾಗಿ ಶ್ರಮಿಸುತ್ತೇನೆ ಎಂದಿದ್ದಾg. ಫಲಿತಾಂಶ ಹೊರಬೀಳುತ್ತಿದ್ದಂತೆ ತ.ನಾಡಿನಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತು.