ಮಂಗಳವಾರ ಬೆಳಗ್ಗೆ ಭಾರತೀಯ ಕಾಲಮಾನ 5.08ಕ್ಕೆ ಹರ್ಕ್ಯುಲಸ್ ಸಿ-130 ವಿಮಾನ ಟೇಕ್ ಆಫ್ ಆಗಿತ್ತು. ಇದಾದ 2 ನಿಮಿಷಗಳಲ್ಲೇ ಅದು ಪತನಗೊಂಡು, ಮೆಡಾನ್‍ನ ವಸತಿ ದೇಶದಲ್ಲಿದ್ದ ಮಸಾಜ್ ಪಾರ್ಲರ್ ಮತ್ತು ಸಣ್ಣ ಹೋಟೆಲ್‍ಗೆ ಡಿಕ್ಕಿ ಹೊಡೆಯಿತು. ಈ ವೇಳೆ ವಿಮಾನದಲ್ಲಿದ್ದ 12 ಮಂದಿ ಸಿಬ್ಬಂದಿ, 101 ಪ್ರಯಾಣಿಕರು ಹಾಗೂ ವಸತಿ ಪ್ರದೇಶದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಗರದ ಅನೇಕ ಕಟ್ಟಡಗಳಿಗೆ ಹಾನಿಯಾಗಿವೆ. ಅಲ್ಲೇ ನಿಲ್ಲಿಸಿದ ವಾಹನಗಳು ಸುಟ್ಟು ಕರಕಲಾಗಿವೆ. ಈವರೆಗೆ 66 ಮೃತದೇಹ ಪತ್ತೆಯಾಗಿವೆ. 3 ಅಂತಸ್ತಿನ ಮಸಾಜ್ ಪಾರ್ಲರ್ ನೆಲಸಮವಾಗಿದ್ದು, ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.