ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ

ಉನ್ನತ ಶಿಕ್ಷಣದ ಪ್ರಮುಖ ಅಂಗ ಸಂಸ್ಥೆಯಾದ ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ ಬುಧವಾರ ದೇಶದ ನಕಲಿ ವಿಶ್ವ ವಿದ್ಯಾನಿಲಯಗಳ ಪಟ್ಟಿ

ಕೊಯಂಬತ್ತೂರು: ಉನ್ನತ ಶಿಕ್ಷಣದ ಪ್ರಮುಖ ಅಂಗ ಸಂಸ್ಥೆಯಾದ ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ ಬುಧವಾರ ದೇಶದ ನಕಲಿ ವಿಶ್ವ ವಿದ್ಯಾನಿಲಯಗಳ ಪಟ್ಟಿ ಬಿಡುಗಡೆ ಮಾಡಿದೆ.

ದೇಶದಲ್ಲಿ ಒಟ್ಟು 21 ನಕಲಿ ಯೂನಿವರ್ಸಿಟಿಗಳಿದ್ದು, ಅದರಲ್ಲಿ 8 ವಿಶ್ವ ವಿದ್ಯಾನಿಲಯಗಳು ಉತ್ತರ ಪ್ರದೇಶದಲ್ಲಿ, 6 ನಕಲಿ ವಿವಿಗಳು ದೆಹಲಿಯಲ್ಲಿವೆ ಎಂದು ಮಾಹಿತಿ ನೀಡಿದೆ. ಇನ್ನು ತಮಿಳುನಾಡು, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ಮತ್ತು ಪಶ್ಚಿಮ ಬಂಗಾಳ ತಲಾ ಒಂದೊಂದು ನಕಲಿ ವಿವಿ ಹೊಂದಿವೆ ಎಂದು ತಿಳಿಸಿದೆ.

ಯುಜಿಸಿ ಧನ ಸಹಾಯ ಆಯೋಗದ 1956ನೇ ನಿಯಮದ ಪ್ರಕಾರ ಕೇಂದ್ರ, ರಾಜ್ಯ ಸರ್ಕಾರಗಳು ಸೆಕ್ಷನ್ 3ರ ಅಡಿಯಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪಿಸಿದ್ದರೆ ಅದಕ್ಕೆ ಮಾತ್ರ ಮಾನ್ಯತೆ ಎಂದು ತಿಳಿಸಿದೆ. ಈ ನಿಯಮದ ಅಡಿ ಸ್ಥಾಪನೆಯಾಗದ ವಿವಿಗಳಿಗೆ ಮಾನ್ಯತೆ ಇರುವುದಿಲ್ಲ, ಅವು ನಕಲಿ ಯೂನಿವರ್ಸಿಟಿಗಳಾಗಿರುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ದೇಶದಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ

  • ರಾಜಾ ಅರೇಬಿಕ್ ವಿವಿ , ನಾಗ್ಪುರ, ಮಹಾರಾಷ್ಟ್ರ
  • ಮೈಥಿಲಿ ವಿಶ್ವವಿದ್ಯಾನಿಲಯ, ದರ್ಬಾಂಗ್, ಬಿಹಾರ
  • ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಡೆಟ್, ದೆಹಲಿ
  • ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ದೆಹಲಿ
  • ವೊಕೇಷನಲ್ ಯೂನಿವರ್ಸಿಟಿ, ದೆಹಲಿ
  • ಎಡಿಆರ್ ಸೆಂಟ್ರಿಕ್ ಜ್ಯೂರಿಡಿಕಲ್  ಯೂನಿವರ್ಸಿಟಿ, ದೆಹಲಿ
  • ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಎಂಜಿನೀಯರಿಂಗ್ ನವದೆಹಲಿ
  • ಬಡಗಾವ್ ಸರ್ಕಾರ್ ವರ್ಲ್ಡ್ ಒಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ, ಬೆಳಗಾವಿ- ಕರ್ನಾಟಕ
  • ಸೇಂಟ್ ಜಾನ್ ಯೂನಿವರ್ಸಿಟಿ, ಕಿಶಾಂತಮ್, ಕೇರಳ
  • ಕೇಸರ್ವಿನಿ ವಿದ್ಯಾಪೀಠ್, ಜಬಲ್ ಪುರ್, ಮದ್ಯಪ್ರದೇಶ
  • ಡಿಡಿಬಿ ಸಂಸ್ಕೃತ ಯೂನಿವರ್ಸಿಟಿ, ಪುತೂರ್, ತಿರುಚಿ, ತಮಿಳುನಾಡು
  • ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಆಲ್ಟರ್ ನೇಟಿವ್  ಮೆಡಿಸಿನ್, ಕೊಲ್ಕೊತಾ, ಪಶ್ಚಿಮ ಬಂಗಾಳ
  • ವಾರಣಾಸಿ ಸಂಸ್ಕೃತಿ ವಿಶ್ವವಿದ್ಯಾನಿಲಯ, ಉತ್ತರ ಪ್ರದೇಶ
  • ಮಹಿಳಾ ಗ್ರಾಮ್ ವಿದ್ಯಾಪೀಠ, ಅಲಹಾಬಾದ್ ಉತ್ತರ ಪ್ರದೇಶ
  • ಗಾಂಧಿ ಹಿಂದಿ ವಿದ್ಯಾಪೀಠ್, ಪ್ರಯಾಗ್, ಉತ್ತರ ಪ್ರದೇಶ
  • ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಕಾನ್ಪುರ್, ಉತ್ತರ ಪ್ರದೇಶ
  •  ನೇತಾಜಿ ಸುಭಾಷ್ ಚಂದ್ರ ಬೋಸ್ ಒಪನ್ ಯೂನಿವರ್ಸಿಟಿ, ಅಲಿಘರ್, ಉತ್ತರ ಪ್ರದೇಶ
  • ಉತ್ತರ ಪ್ರದೇಶ ವಿಶ್ವ ವಿದ್ಯಾನಿಲಯ, ಕೋಸಿ ಕಾಲನ್, ಮಥುರಾ, ಉತ್ತರ ಪ್ರದೇಶ
  • ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವ ವಿದ್ಯಾನಿಲಯ, ಪ್ರತಾಪ್ ಗಡ,ಉತ್ತರ ಪ್ರದೇಶ
  • ಇಂದ್ರಪ್ರಸ್ತ ಶಿಕ್ಷಾ ಪರಿಷದ್, ಇನ್ ಸ್ಟಿಟ್ಯೂಷನಲ್  ಏರಿಯಾ, ಖೋಡಾ. ಉತ್ತರ ಪ್ರದೇಶ
  • ಗುರುಕುಲ ವಿಶ್ವ ವಿದ್ಯಾನಿಲಯ, ವೃಂದಾವನ್.ಉತ್ತರ ಪ್ರದೇಶ
  • ಭಾರತೀಯ ಶಿಕ್ಷಾ ಪರಿಷದ್ ಲಕ್ನೋ, ಉತ್ತರ ಪ್ರದೇಶ

Related Stories

No stories found.

Advertisement

X
Kannada Prabha
www.kannadaprabha.com