
ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೆ.ಎಂ ಮಾಣಿರ ಬಜೆಟ್ ಮಂಡನೆ ವೇಳೆ ವಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿವೆ.
ಸಚಿವ ಕೆ.ಎಂ ಮಾಣಿ ವಿರುದ್ಧ ಬಾರ್ ಲೈಸೆನ್ಸ್ ಗೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಣಿ ಅವರು ಬಜೆಟ್ ಮಂಡನೆ ಮಾಡದಂತೆ ವಿಪಕ್ಷ ಸಿಪಿಎಂ ತೀವ್ರ ಪ್ರತಿಭಟನೆ ನಡೆಸಿದೆ ಈ ನಡುವೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಸಿಪಿಎಂ ಶಾಸಕರು ಪರಸ್ಪರ ಕೈ ಕೈ ಮೀಲಾಯಿಸಿದ್ದಾರೆ.
ಬಜೆಟ್ ಮಂಡನೆಗೆ ವಿಪಕ್ಷಗಳು ಅವಕಾಶಕೊಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಚಿವರು ಹಣಕಾಸು ಸಚಿವ ಮಾಣಿ ಅವರನ್ನು ಸುತ್ತುವರೆದರೂ ಇದೇ ವೇಳೆ ಮಾರ್ಷಲ್ ಗಳು ಸಹ ಮಾಣಿ ಅವರಿಗೆ ಭದ್ರತೆ ನೀಡಿದ್ದರಿಂದ ಮಾಣಿ ಅವರು ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡನೆ ಬಳಿಕ ಕಾಂಗ್ರೆಸ್ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದ್ದರು.
ಇದರಿಂದ ರೊಚ್ಚಿಗೆದ್ದ ಸಿಪಿಎಂ ಶಾಸಕರು ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಠಿಸಿದರು. ಕುರ್ಚಿ, ಪೀಠೋಪಕರಣ, ಕಂಪ್ಯೂಟರ್ ಗಳನ್ನು ಧ್ವಂಸಗೊಳಿಸಿದ್ದಾರೆ. ಇಲ್ಲದೆ ಸಿಪಿಎಂನ ಸಾವಿರಾರು ಕಾರ್ಯಕರ್ತರು ವಿಧಾನಸಭೆಯ ಒಳಗೂ ಹಾಗೂ ಹೊರಗೂ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಗಲಾಟೆ ಮಧ್ಯೆ ಅಸ್ವಸ್ಥಗೊಂಡ ಸಿಪಿಎಂ ಶಾಸಕ ಶಿವಂಕುಟ್ಟಿ
ಬಜೆಟ್ ಮಂಡನೆ ವೇಳೆ ಸಿಪಿಎಂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪರಿಣಾಮ ಸಿಪಿಎಂ ಶಾಸಕ ಶಿವಂಕುಟ್ಟಿ ತೀವ್ರ ಅಸ್ವಸ್ಥಗೊಂಡರು. ಇದರಿಂದಾಗಿ ವಿಧಾಸನಭೆಯಲ್ಲೇ ಶಿವಂಕುಟ್ಟಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.
Advertisement