
ಬೆಂಗಳೂರು: ಕೊತ್ತನೂರು ಹಾಗೂ ಹೆಣ್ಣೂರಿನಲ್ಲಿ ಆಫ್ರಿಕಾ ಮೂಲದ ಪ್ರಜೆಗಳ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ 9 ಆರೋಪಿಗಳನ್ನು ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರಿನ ರಮೇಶ್ ಹಾಗೂ ವಿಜಯ್ ಕುಮಾರ್, ಕಿರಣ್, ಜೋಸೆಫ್, ದಯಾನಂದ, ಜೇಮ್ಸ್, ಲಾರ್ಡ್ಸ್, ಬಾಲಾಕುಮಾರ್, ಭಾನುಪ್ರಕಾಶ್ ಬಂಧಿತರು. ಭೈರತಿ ಸಮೀಪ ಐವರಿ ಕೋಸ್ಟ್ ದೇಶದವರ ಮೇಲೆ ಹಲ್ಲೆ ನಡೆದ ಸಂಬಂಧ ಕೊತ್ತನೂರು ಠಾಣೆಯಲ್ಲಿ, ಹೆಣ್ಣೂರಿನಲ್ಲಿರುವ ಹೊಟೇಲ್ ಗೆ ನುಗ್ಗಿ ಆಫ್ರಿಕಾ ಮೂಲದ ಪ್ರಜೆ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಹೆಣ್ಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಆಫ್ರಿಕಾ ಪ್ರಜೆಗಳು ಈ ಪ್ರದೇಶದಲ್ಲಿ ಗಲಾಟೆ, ಕಿರುಚಾಟ ಮಾಡುವುದು ಹಾಗೂ ಸ್ಥಳೀಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೂ, ಗಲಾಟೆ ಮುಂದುವರೆದ ಹಿನ್ನೆಲೆಯಲ್ಲಿ ಆರೋಪಿಗಳು ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement