

ಹರಿಯಾಣ: 28 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಜಿಲ್ಲಾ ನ್ಯಾಯಾಧೀಶರಾದ ಕಂಚನ್ ಮಹಿ ಅವರನ್ನೊಳಗೊಂಡ ನ್ಯಾಯಾಪೀಠ ಅತ್ಯಾಚಾರಿ ಆರೋಪಿಗಳಿಗೆ ತಲಾ 20 ಸಾವಿರ ದಂಡ ಹಾಗೂ 20 ಸೆರೆವಾಸ ಶಿಕ್ಷೆಯ ಆದೇಶ ಹೊರಡಿಸಿದೆ.
ಸುಮಿತ್, ದಿನೇಶ್ ಮತ್ತು ಅಜ್ಮೆರ್ ಶಿಕ್ಷೆಗೊಳಗಾದ ಅಪರಾಧಿಗಳು. ಈ ಮೂವರು 13 ಮಾರ್ಚ್, 2013ರಂದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.