ಮಾಲ್ಡಿವ್ಸ್ ಮಾಜಿ ಅಧ್ಯಕ್ಷನಿಗೆ ಜೈಲು, ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

ಮೊಹಮ್ಮದ್ ನಶೀದ್
ಮೊಹಮ್ಮದ್ ನಶೀದ್

ನವದೆಹಲಿ: ಉಗ್ರ ನಿಗ್ರಹ ಕಾಯ್ದೆಯಡಿ ಮಾಲ್ಡಿವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರಿಗೆ 13 ವರ್ಷ ಜೈಲು ಶಿಕ್ಷೆಯಾಗಿರುವುದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

'ಮಾಲ್ಡಿವ್ಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಮಗೆ ತೀವ್ರ ಕಳವಳ ಇದೆ. ಅಲ್ಲಿನ ಪರಿಸ್ಥಿತಿಯ ಕುರಿತು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

2012ರಲ್ಲಿ ಕ್ರಿಮಿನಲ್ ಅಪರಾಧ ನ್ಯಾಯಾಯಲದ ನ್ಯಾಯಾಧೀಶರ ಬಂಧನಕ್ಕೆ ಆದೇಶಿಸಿದ್ದ ನಶೀದ್ ಅವರನ್ನು ಕಳೆದ ಫೆಬ್ರವರಿ 22ರಂದು ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಅವರಿಗೆ ಶುಕ್ರವಾರ ಮಾಲ್ಡಿವ್ಸ್ ಕ್ರಿಮಿನಲ್ ಕೋರ್ಟ್ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಾಲ್ಡಿವ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿರುವ 47 ವರ್ಷದ ನಶೀದ್, 2012 ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ ತಾವು ಬಂಧಿತರಾಗುವುದನ್ನು ತಪ್ಪಿಸಲು ನಶೀದ್ ಅವರು ಮಾಲ್ಡಿವ್ಸ್‌ನ ಭಾರತೀಯ ಹೈಕಮಿಶನ್ ಕಚೇರಿ ಸಂಪರ್ಕಿಸಿ ತಮಗೆ ಭಾರತದಲ್ಲಿ ಆಶ್ರಯ ನೀಡಬೇಕೆಂದು ಕೋರಿದ್ದರು. ಹೈ ಕಮಿಷನ್ ಕಚೇರಿಯ ಆವರಣದಲ್ಲಿದ್ದ ಕಾರಣ ನಶೀದ್ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com