ವಿವಾದಕ್ಕೆ ಕಾರಣ ಆಯ್ತು ಗಾಂಧಿ ಜಯಂತಿ ರಜೆ

ಗೋವಾ ಸರ್ಕಾರ ಗಾಂಧಿ ಜಯಂತಿ (ಅ.2)ಗೆ ಅಧಿಕೃತ ರಜೆ ನೀಡಿದೆಯೋ ಇಲ್ಲವೋ ಎಂಬ ವಿಚಾರದ ಬಗ್ಗೆ ಭಾನುವಾರ ಗೊಂದಲ ಉಂಟಾಗಿತ್ತು...
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ

ಪಣಜಿ: ಗೋವಾ ಸರ್ಕಾರ ಗಾಂಧಿ ಜಯಂತಿ (ಅ.2)ಗೆ ಅಧಿಕೃತ ರಜೆ ನೀಡಿದೆಯೋ ಇಲ್ಲವೋ ಎಂಬ ವಿಚಾರದ ಬಗ್ಗೆ ಭಾನುವಾರ ಗೊಂದಲ ಉಂಟಾಗಿತ್ತು.

ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಬಿಜೆಪಿ ಸರ್ಕಾರ ಅಧಿಕೃತ ರಜೆಗಳ ಪಟ್ಟಿಯಿಂದ ಗಾಂಧಿ ಜಯಂತಿಯನ್ನು ತೆಗೆದು ಹಾಕಿದೆ ಎಂಬ ಸುದ್ದಿ ಪ್ರಸಾರವಾಯಿತು. ಅಷ್ಟೇ ಏಕೆ ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಯಾಗಲಾರಂಭಿಸಿತು.

ದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪಿ.ಸಿ.ಚಾಕೋ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಗಾಂಧೀಜಿ ಬಗ್ಗೆ ಎಂಥ ಮನಃಸ್ಥಿತಿ ಹೊಂದಿವೆ ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಇಂಥ ನಿರ್ಧಾರ ರಾಷ್ಟ್ರ ವಿರೋಧಿ ಕೃತ್ಯ ಯಾವುದಾದರೂ ಒಂದು ರಾಜ್ಯ ಸರ್ಕಾರದಿಂದ ಇಂಥ ನಿರ್ಧಾರ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಉದ್ದೇಶಪೂರ್ವಕವಲ್ಲ: ಎಲ್ಲೆಡೆ ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಗೋವಾ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಮಾತನಾಡಿ, `ಸರ್ಕಾರ ಉದ್ದೇಶಪೂರ್ವಕವಾಗಿ ಇಂಥ ಕೃತ್ಯವೆಸಗಿಲ್ಲ. ಕಣ್ಣು ತಪ್ಪಿನಿಂದ ಇಂಥ ಅಚಾತುರ್ಯವಾಗಿದೆ. ಕಾಂಗ್ರೆಸ್ ಮತ್ತಿತರ ಪಕ್ಷಗಳು ರಜೆ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುತ್ತಿವೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com