ಶಿಕ್ಷಣಕ್ಕಿರಲಿ ಮಾತೃಭಾಷೆ

ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆಯೇ ಇರಲಿ. ವಿದೇಶಿ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಕೊಟ್ಟರೆ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯಿಂದ ದೂರವಾಗುತ್ತಾರೆ. ಹೀಗೆಂದು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಆರ್ ಎಸ್‍ಎಸ್ ಸಲಹೆ ಮಾಡಿದೆ...
ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ
ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ

ನಾಗ್ಪುರ: ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆಯೇ ಇರಲಿ. ವಿದೇಶಿ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಕೊಟ್ಟರೆ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯಿಂದ ದೂರವಾಗುತ್ತಾರೆ. ಹೀಗೆಂದು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಆರ್ ಎಸ್‍ಎಸ್ ಸಲಹೆ ಮಾಡಿದೆ.

ಭಾನುವಾರ ನಾಗ್ಪುರದಲ್ಲಿ ಮುಕ್ತಾಯಗೊಂಡ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಈ ಮಾಹಿತಿ ನೀಡಿದ್ದಾರೆ. ದೇಶದ ಪ್ರಮುಖ ನಾಯಕರಾಗಿದ್ದ ಮಹಾತ್ಮಾ ಗಾಂಧಿ, ಎಂ.ಎಂ. ಮಾಳವೀಯ, ರವೀಂದ್ರನಾಥ್ ಠಾಗೋರ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಪ್ರಮುಖರು ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದಿದ್ದರು. ಅವರು ಜಗದ್ವಿಖ್ಯಾತರಾದರು ಎಂದು ಸುರೇಶ್ ಭಯ್ಯಾಜಿ ಜೋಶಿ ತಿಳಿಸಿದ್ದಾರೆ.

ಮಂದಿರ ಬಿಟ್ಟಿಲ್ಲ: ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರ ಕೈಬಿಟ್ಟಿಲ್ಲ. ಅದಕ್ಕಾಗಿ ದೇಶಾದ್ಯಂತ ಹೊಸ ಆಂದೋಲನ ಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಹಿಂದೂಗಳ ಪರ ತೀರ್ಪು ನೀಡಿದೆ. ಇದೀಗ ಪ್ರಕರಣ ಸುಪ್ರೀಂ ಕೋರ್ಟಲ್ಲಿರುವುದರಿಂದ ದೇಗುಲ ನಿರ್ಮಾಣ ಪ್ರಕ್ರಿಯೆ ವಿಳಂಬವಾಗಬಹುದು ಎಂದಿದ್ದಾರೆ ಅವರು.
 
ಗೋ ತಳಿಗೆ ಆದ್ಯತೆ: ಸಂಘಟನೆ ದೇಶಿ ಗೋ ತಳಿ ಸಂರಕ್ಷಿಸಲು ಕಟಿಬದಟಛಿವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಕೇವಲ ಕಾನೂನಿನಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಾಗಿ, ಗೋ ತಳಿ ರಕ್ಷಣೆಗೆ ಜಾಗೃತಿಯೂ ಅಗತ್ಯ ಎಂದರು.

ಅನಾಹುತವಾಗಿಲ್ಲ: ಹಿಂದೂ ಪರ ಸಂಘಟನೆಗಳು ಘರ್ ವಾಪಸಿ (ಮರು ಮತಾಂತರ) ಬಗ್ಗೆ ಮಾತನಾಡುವುದರಿಂದ ಅನಾಹುತವೇನೂ ಆಗಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಭಯ್ಯಾಜಿ ಪ್ರಶ್ನಿಸಿದರು. ಜಮ್ಮು-ಕಾಶ್ಮೀರದಲ್ಲಿನ ಬಿಜೆಪಿ-ಪಿಡಿಪಿ ಸರ್ಕಾರದ ಮೌಲ್ಯಮಾಪನ ಮಾಡುವುದಿಲ್ಲ. ಬಿಜೆಪಿ ನಾಯಕರು ಹೇಳಿದ್ದನ್ನು ಕೇಳಿಸಿಕೊಂಡು, ಅಗತ್ಯ ಬಿದ್ದರೆ ಸಲಹೆ ನೀಡುತ್ತೇವೆ ಎಂದು ಭಯ್ಯಾಜಿ ಜೋಶಿ ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com