ಭಾರತೀಯ ಮುಸ್ಲಿಂರನ್ನು ಸೆಳೆಯುವಲ್ಲಿ ಇಸಿಸ್ ವಿಫಲ: ರಾಜನಾಥ್ ಸಿಂಗ್

ಅಮಾನವೀಯ ಕೃತ್ಯಗಳಿಂದ ಪ್ರಪಂಚವನ್ನೇ ದಂಗು ಪಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಭಾರತೀಯ ಮುಸ್ಲಿಂರನ್ನು ತನ್ನತ್ತ ಆರ್ಕಷಿಸುವಲ್ಲಿ ವಿಫಲವಾಗಿದೆ...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on

ಜೈಪುರ್: ಅಮಾನವೀಯ ಕೃತ್ಯಗಳಿಂದ ಪ್ರಪಂಚವನ್ನೇ ದಂಗು ಪಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಭಾರತೀಯ ಮುಸ್ಲಿಂರನ್ನು ತನ್ನತ್ತ ಆರ್ಕಷಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಯೋತ್ಪಾದನೆ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ಮುಸ್ಲಿಂರು ದೇಶಪ್ರೇಮಿಗಳಾಗಿದ್ದು ಅವರು ದೇಶವಿದ್ರೋಹ ಕೆಲಸಗಳನ್ನು ಮಾಡಲು ಬಯಸುವುದಿಲ್ಲ. ಉಗ್ರಗಾಮಿತ್ವ ಅವರ ಪ್ರಕೃತಿಗೆ ವಿರೋಧವಾಗಿದೆ ಎಂದರು.

ಗುಪ್ತಚರ ಇಲಾಖೆ ಪ್ರಕಾರ, ಬೆರಳೆಣಿಕೆಯಷ್ಟು ಭಾರತೀಯ ಮುಸ್ಲಿಂ ಯುವಕರು ಇಸಿಸ್ ಉಗ್ರ ಸಂಘಟನೆ ಸೇರಿದ್ದರು. ಬಳಿಕ ಕುಟುಂಬಸ್ಥರ ಮನವೊಲಿಕೆಯ ನಂತರ ಕೆಲವರು ಇಸಿಸ್ ತೊರೆದು ವಾಪಸ್ಸಾಗಿದ್ದಾರೆ ಎಂದರು. ಅಲ್ಲದೆ ಇಂಡೋನೇಷಿಯ ಬಳಿಕ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಭಾರತ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com