ಕೋರ್ಟ್ ಗೆ ಶಂಕಿತ ಉಗ್ರರು ಹಾಜರು

2008ರ ಆಪರೇಶನ್ ಟೆರರ್ ಕಾರ್ಯಾಚರಣೆಯಲ್ಲಿ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಬಂಧಿತರಾಗಿದ್ದ ಇಬ್ಬರು ಶಂಕಿತ ಉಗ್ರರನ್ನು ಬುಧವಾರ ಜಿಲ್ಲಾ ನ್ಯಾಯಾಧೀಶರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮಂಗಳೂರು: 2008ರ ಆಪರೇಶನ್ ಟೆರರ್ ಕಾರ್ಯಾಚರಣೆಯಲ್ಲಿ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಬಂಧಿತರಾಗಿದ್ದ ಇಬ್ಬರು ಶಂಕಿತ ಉಗ್ರರನ್ನು ಬುಧವಾರ ಜಿಲ್ಲಾ ನ್ಯಾಯಾಧೀಶರ ಮುಂದೆ ಮುಂಬೈ ಪೊಲೀಸರು ಹಾಜರು ಪಡಿಸಿದರು.

ಸೈಯ್ಯದ್ ಮೊಹಮ್ಮದ್ ನೌಷಾದ್, ಅಹ್ಮದ್ ಬಾವಾ ಕೋರ್ಟ್ಗೆ ಹಾಜರಾದವರು. ಪೊಲೀಸರು 2008ರಲ್ಲಿ ಉಳ್ಳಾಲ ಮುಕ್ಕಚ್ಚೇರಿ ಮನೆಗೆ ದಾಳಿ ಮಾಡಿ ಚೆಂಬುಗುಡ್ಡೆ ಮನೆಗಳಲ್ಲಿ ಸ್ಫೋಟಕ ವಶಪಡಿಸಿಕೊಂಡು ಇವರನ್ನು ಬಂಧಿಸಿದ್ದರು.

ಪ್ರಕರಣದಲ್ಲಿ 13 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಶರೀಬ್ ಭಟ್ಕಳ್ ಮಾತ್ರ ಮಂಗಳೂರು ಜೈಲಿನಲ್ಲಿದ್ದ, ನಾಲ್ವರು ಜಾಮೀನು ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com