'ಅಮರಾವತಿ' ಆಂಧ್ರಪ್ರದೇಶ ರಾಜ್ಯದ ರಾಜಧಾನಿ ಹೆಸರು..!

ಆಂಧ್ರಪ್ರದೇಶ ರಾಜ್ಯದ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ರಾಜ್ಯಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ....
ಆಂಧ್ರಪ್ರದೇಶದಲ್ಲಿರುವ ಅಮರಾವತಿ
ಆಂಧ್ರಪ್ರದೇಶದಲ್ಲಿರುವ ಅಮರಾವತಿ

ಹೈದರಾಬಾದ್: ಆಂಧ್ರಪ್ರದೇಶ ರಾಜ್ಯದ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ರಾಜ್ಯಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಅಖಂಡ ಆಂಧ್ರಪ್ರದೇಶ ಒಡೆದು ತೆಲಂಗಾಣ ಹಾಗೂ ಆಂಧ್ರಪ್ರದೇಶವಾಗಿ ಇಬ್ಭಾಗವಾದ ಬಳಿಕ ಪ್ರಸ್ತುತ ಹೈದರಾಬಾದ್ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳಿಗೆ ಹೈದರಾಬಾದ್ ನಗರ ಜಂಟಿ ರಾಜಧಾನಿಯಾಗಿ ಮುಂದುವರೆದಿದೆ. ಆದರೆ, ಇದು ಕೇವಲ 10 ವರ್ಷಗಳ ಕಾಲ ಮಾತ್ರಜಂಟಿ ರಾಜಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದು, ಆ ಬಳಿಕ ಸಂಪೂರ್ಣವಾಗಿ ತೆಲಂಗಾಣ ರಾಜ್ಯದ ರಾಜಧಾನಿಯಾಗಲಿದೆ. ಹೀಗಾಗಿ ಆಂಧ್ರಪ್ರದೇಶ ಸರ್ಕಾರ ತನ್ನ ನೂತನ ರಾಜಧಾನಿ ನಿರ್ಮಾಣಕ್ಕೆ ಮುಂದಾಗಿದ್ದು, ವಿಜಯವಾಡ-ಗುಂಟೂರು ಮಧ್ಯಭಾಗದಲ್ಲಿ ರಾಜಧಾನಿ ನಿರ್ಮಾಣಕ್ಕೆ ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿಕೊಂಡಿದೆ.

ಈ ನೂತನ ರಾಜಧಾನಿ 'ಅಮರಾವತಿ' ಎಂದು ನಾಮಕಾರಣ ಮಾಡಲು ಚಂದ್ರಬಾಬು ನಾಯ್ಡು ಸರ್ಕಾರ ತೀರ್ಮಾನಿಸಿದೆ. ಕೃಷ್ಣಾ ನದಿ ಪ್ರಾಂತ್ಯದ ಇತಿಹಾಸ ಪ್ರಸಿದ್ಧ ಬೌದ್ಧ ತಾಣದ ಹೆಸರು 'ಅಮರಾವತಿ'ಯನ್ನೇ ಆಂಧ್ರಪ್ರದೇಶ ರಾಜ್ಯದ ನೂತನ ರಾಜಧಾನಿಗೆ ಇಡಲಾಗುತ್ತಿದೆ. ಚಂದ್ರಬಾಬು ನಾಯ್ಡು ಸರ್ಕಾರ ಈಗಾಗಲೇ ಹೊಸ ರಾಜಧಾನಿ ನಿರ್ಮಾಣಕ್ಕಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಸುತ್ತಿದ್ದು, ಸುಮಾರು 33,000 ಎಕರೆ ಭೂಮಿಯನ್ನು ಸರ್ಕಾರ ಪಡೆದುಕೊಂಡಿದೆ. ಸಿಂಗಪುರ ಮೂಲದ ಸಂಸ್ಥೆಯೊಂದು ಆಂಧ್ರಪ್ರದೇಶದ ಹೊಸ ರಾಜಧಾನಿ ನಿರ್ಮಾಣ ಕಾರ್ಯದ ಹೊಣೆ ಹೊತ್ತಿದೆ. ಈ ವರ್ಷದ ಮೇ-ಜೂನ್ ತಿಂಗಳಲ್ಲಿ ರಾಜಧಾನಿ ಹೇಗಿರಲಿದೆ ಎಂಬ ಒಂದು ಚಿತ್ರಣ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com