ಹಾಲಿವುಡ್ ನಟಿ ಏಂಜಲೀನಾ ಜೋಲಿ
ದೇಶ
ಕ್ಯಾನ್ಸರ್ ಭಯಕ್ಕೆ ಅಂಡಾಶಯವನ್ನು ತೆಗೆಸಿದ ನಟಿ
ಕ್ಯಾನ್ಸರ್ ರೋಗಕ್ಕೆ ಭಯಭೀತರಾಗಿರುವ ಹಾಲಿವುಡ್ ನಟಿ ಏಂಜಲೀನಾ ಜೋಲಿ ಅವರು ಸರ್ಜರಿ ಮೂಲಕ...
ವಾಷಿಂಗ್ಟನ್: ಕ್ಯಾನ್ಸರ್ ರೋಗಕ್ಕೆ ಭಯಭೀತರಾಗಿರುವ ಹಾಲಿವುಡ್ ನಟಿ ಏಂಜಲೀನಾ ಜೋಲಿ ಅವರು ಸರ್ಜರಿ ಮೂಲಕ ತಮ್ಮ ಅಂಡಾಶಯವನ್ನು ತೆಗೆಸಿಕೊಂಡಿದ್ದಾರೆ.
ಏಂಜಲೀನಾ ವೈದ್ಯರು ಅನುವಂಶಿಕವಾಗಿ ಶೇ.50ರಷ್ಟು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಏಂಜಲೀನಾ ಅರು ತಮ್ಮ ಅಂಡಾಶಯ ಮತ್ತು ಗರ್ಭನಾಳದ ತೆಗೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ.87 ರಷ್ಟಿದ್ದ ಕಾರಣ ಏಂಜಲೀನಾ ಅವರು ಎರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಏಜಂಲೀನಾ ತಾಯಿ, ಅಜ್ಜಿ ಹಾಗೂ ಅತ್ತೆ ಅವರು ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು.
ಇದರಿಂದ ಅನುವಂಶಿಕವಾಗಿ ಬರಬಹುದು ಎಂದು ವೈದ್ಯರು ಎಚ್ಚರಿಸಿದ್ದರು. ಈಗ ಅಂಡಾಶಯ ಮತ್ತು ಗರ್ಭನಾಳ ತೆಗೆದಿರುವ ಕಾರಣ ಅವರಿಗೆ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿಲ್ಲವೆಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ