
ನ್ಯೂಯಾರ್ಕ್: ಸಲಿಂಗಿಗಳನ್ನು ಸಂಗಾತಿಯಾಗಿ ಹೊಂದಲು ವಿಶ್ವಸಂಸ್ಥೆ ಸಿಬ್ಬಂದಿಗೆ ಅವಕಾಶ ನೀಡುವ ಪ್ರಸ್ತಾವಕ್ಕೆ ಭಾರತದ ವಿರೋಧದ ನಡುವೆಯೂ ಅಂಗೀಕಾರ ಸಿಕ್ಕಿದೆ.
ಆಡಳಿತಾತ್ಮಕ ಮತ್ತು ಹಣಕಾಸು ವಿಚಾರಗಳನ್ನು ನಿರ್ವಹಿಸುವ ವಿಶ್ವಸಂಸ್ಥೆ ಮಹಾಧಿವೇಶನದ ಐದನೇ ಸಮಿತಿಯಲ್ಲಿ ಈ ಪ್ರಸ್ತಾವ ವಿರೋಧಿಸಿ ರಷ್ಯ ನಿರ್ಣಯ ಮಂಡಿಸಿತ್ತು. ಅದನ್ನು ಭಾರತ, ಚೀನಾ, ಪಾಕಿಸ್ತಾನ¸ ಸೇರಿ 11 ರಾಷ್ಟ್ರಗಳು ಬೆಂಬಲಿಸಿದವು. 80 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿವೆ.
ಭಾರತದಲ್ಲಿ ಸಲಿಂಗಕಾಮ ಅಪರಾಧ. 2011ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತಾದರೂ, 2013ರಲ್ಲಿ ಸುಪ್ರೀಂ ಅದನ್ನು ರದ್ದುಪಡಿಸಿತ್ತು.
Advertisement