ದೇಶದ ಹೊಸ್ತಿಲಲ್ಲೇ ಉಗ್ರರು!
ನವದೆಹಲಿ: ಉಗ್ರರೇನೂ ದೂರವಿಲ್ಲ. ಅಂತಾರಾಷ್ಟ್ರೀಯ ಗಡಿಯಲ್ಲಿ ನಮ್ಮಿಂದ ಸ್ವಲ್ಪವೇ ಅಂತರದಲ್ಲಿದ್ದಾರೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಬಿಎಸ್‍ಎಫ್ ಹಾಗೂ ಗುಪ್ತಚರ ಸಂಸ್ಥೆಗಳು ನೀಡಿರುವ ಎಚ್ಚರಿಕೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸದಾ ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನ ಬೆಂಬಲಿತ ಲಷ್ಕರ್ ಉಗ್ರರು ಈಗ ಗಡಿಯಲ್ಲಿ ಒಳನುಸುಳಲು ಕ್ಷಣಗಣನೆ ಶುರುಮಾಡಿದ್ದಾರೆ. ಪಾಕಿಸ್ತಾನದ ಜಿಹಾದಿ ಯಂತ್ರವು ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 3 ಕಿ.ಮೀ. ದೂರದಲ್ಲೇನೆಲೆಗಳನ್ನು ಸ್ಥಾಪಿಸಿಕೊಂಡಿದ್ದು, ಫಿದಾ ಯಿನ್ ದಾಳಿಗೆ ಸಜ್ಜಾಗಿದೆ ಎಂದು ಗುಪ್ತಚರ ಮೂಲಗಳು ಮಾಹಿತಿನೀಡಿವೆ. ಲಷ್ಕರ್ ಉಗ್ರರಿಗೆ ಪಾಕಿಸ್ತಾನದ ಸೈನಿಕರು ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ನೆರವಿನಿಂದಲೇ ಉಗ್ರರು ಭಾರತದೊಳಕ್ಕೆ ನುಸುಳುತ್ತಿದ್ದಾರೆ.
ಜಮ್ಮುವಿನ ಭದ್ರತಾ ಸಂಸ್ಥೆಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯೂ ಇದೇ ಕಾರ್ಯತಂತ್ರದ ಒಂದು ಭಾಗ. ಜಮ್ಮು ಗಡಿಯಲ್ಲಿರುವ ಉಗ್ರ ಶಿಬಿರಗಳನ್ನು
26/11 ದಾಳಿಯ ಸಂಚುಕೋರ ಹಫೀಜ್ ಸಯೀದ್ ನಿರ್ವಹಿಸುತ್ತಿದ್ದಾನೆ ಎಂಬ ವಿಚಾರವನ್ನೂ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ. ಗಡಿಯಲ್ಲಿ ಉಗ್ರರು ನೆಲೆಗಳನ್ನು ಸ್ಥಾಪಿಸಿರುವ ಬಗ್ಗೆ ಈಗಾಗಲೇ ಗಡಿ ಭದ್ರತಾ ಪಡೆ(ಬಿಎಸ್‍ಎಫ್ ) ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿದೆ.
ಗಡಿ ಪ್ರದೇಶದಲ್ಲಿ 8 ರಿಂದ 10 ಉಗ್ರ ಶಿಬಿರಗಳು ಕಂಡುಬಂದಿದ್ದು, ಇದರೊಳಗೆ ತರಬೇತಿ ಪಡೆದ 60ಕ್ಕೂ ಹೆಚ್ಚು ಉಗ್ರರಿದ್ದಾರೆ. ಇವರೆಲ್ಲರೂ ಸೂಕ್ತ
ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸೂಚನೆ ಬಂದೊಡನೆ ಭಾರತದ ಮೇಲೆ ದಾಳಿ ಶುರುಮಾಡಲಿದ್ದಾರೆ ಎನ್ನಲಾಗಿದೆ. ಇವರೆಲ್ಲರಿಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ನೀಡಲಾಗಿದೆ. ಇದೇ ವೇಳೆ, ಲಷ್ಕರ್ ಉಗ್ರರೊಂದಿಗೆ ತೆಹ್ರೀಕ್-ಇ-ತಾಲಿಬಾನ್ ಉಗ್ರರೂ ಸೇರಿಕೊಂಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಈ ಎರಡೂ ಸಂಘಟನೆಗಳ 12-15 ಉಗ್ರರುದೇಶದೊಳಕ್ಕೆ ನುಸುಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆ.
ಆಕ್ರಮಣಕ್ಕೀಡಾಗುವ ಪ್ರದೇಶಗಳು
ಜಮ್ಮುವಿನ ಸಾಂಬಾ, ರಾಮಗಡ, ನಾರಾಯಣ ಪುರ ಚೆಕ್‍ಪಾಯಿಂಟ್, ಅರ್ನಿಯಾ, ಅಖ್ನೂರ್ ಮತ್ತು ಕಥುವಾ 39 ಗಡಿ ಠಾಣೆ ನಿರ್ಮಾಣ
ವಿಳಂಬಕ್ಕೆ ಹಲವು ಅಡ್ಡಿ ಒಳನುಸುಳುವಿಕೆಯನ್ನು ತಪ್ಪಿಸಲು ಭಾರತ- ಪಾಕಿಸ್ತಾನ ಗಡಿಯಲ್ಲಿ 39 ಗಡಿ ಠಾಣೆ(ಬಿಒಪಿ) ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತು. ಆದರೆ
ಭೂಸ್ವಾಧೀನ, ಸ್ಥಳೀಯರ ಪ್ರತಿಭಟನೆ ಮತ್ತಿತರ ಕಾರಣಗಳಿಂದಾಗಿ ಈ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ
ಮಾಹಿತಿ ನೀಡಿದೆ. 3,232 ಕಿ.ಮೀ. ಉದ್ದದ ಗಡಿ ಭಾಗದಲ್ಲಿ ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರವನ್ನೊ ಳಗೊಂಡಂತೆ 609 ಗಡಿ ಠಾಣೆಗಳಿವೆ. ಮತ್ತೆ 126 ಠಾಣೆ ನಿರ್ಮಿಸಲು ವರ್ಷದ ಹಿಂದೆಯೇ ನಿರ್ಧರಿಸಲಾಗಿತ್ತು. ಈ ಮೂಲಕ ಒಳನುಸುಳುವಿಕೆ ಶಸ್ತ್ರಾಸ್ತ್ರ ಕಳ್ಳಸಾಗಣೆ ತಡೆಯುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಹಲವು ಅಡ್ಡಿಗಳು ಎದುರಾದ ಕಾರಣ ಇದು ಸಾಧ್ಯವಾಗಲಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕದನವಿರಾಮ ಉಲ್ಲಂಘನೆ ಪ್ರಕರಣಗಳು
ಕಳೆದ ವರ್ಷದಿಂದ ಈವರೆಗೆ 550 ಬಾರಿ
2014ರಲ್ಲಿ 175 ಬಾರಿ
2011ರಲ್ಲಿ 52
2010ರಲ್ಲಿ 95
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ