
ನ್ಯೂಯಾರ್ಕ್: ಅಮೆರಿಕಾದ ಗ್ಯಾಸ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಭಾರತದ ಗುಜರಾತ್ ಮೂಲದ ಮಹಿಳೆಯೊಬ್ಬಳನ್ನು ದರೋಡೆ ಮಾಡಲು ಬಂದಿದ್ದ ಶಸ್ತ್ರಧಾರಿ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ದಕ್ಷಿಣ ಕೆರೋಲಿನಾದ ಪೌಡರಸ್ರ ವಿಲ್ಲೆಯಲ್ಲಿ ಗ್ಯಾಸ್ ಕಂಪೆನಿ ಸಗಹ ಮಾಲಿಕೆಯಾಗಿದ್ದ ಮೃದುಲಾಬೆನ್ ಪಟೇಲ್ ಅವರನ್ನು ಮುಖಕ್ಕೆ ಗುಂಡು ಹಾರಿಸಿ ಹತ್ಯೆಮಾಡಲಾಗಿದೆ. ಗುರುವಾರ ರಾತ್ರಿ ದುಷ್ಕರ್ಮಿಯ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಹಿಳೆ ಇಂದು ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ದರೋಡೆ ಪ್ರಕರಣವೇ ಹೊರತು ಜನಾಂಗೀಯ ದಾಳಿಯಲ್ಲ ಎಂದು ಪೊಲೀಸರು ಹೇಳಿದ್ದು, ಆರೋಪಿಗಳ ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Advertisement