

ನ್ಯೂಯಾರ್ಕ್: ಫೇಸ್ ಬುಕ್ ಸಿಇಒ ಶೆರ್ಲ್ ಸ್ಯಾಂಡ್ ಬರ್ಗ್ ಪತಿ ಹಾಗೂ ಸರ್ವೇ ಮಂಕೀ ಕಂಪನಿಯ ಸಿಇಒ ಡೇವ್ ಗೋಲ್ಡ್ ಬರ್ಗ್ (47) ಹಠಾತ್ ನಿಧನರಾಗಿದ್ದಾರೆ.
ಈ ಶೋಕಸುದ್ದಿಯನ್ನು ಶನಿವಾರದಂದು ಗೋಲ್ಡ್ ಬರ್ಗ್ ಸೋದರ ರಾಬರ್ಟ್ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಹಾಗೂ ಮತ್ತಿತರು ಬಂಧುಗಳನ್ನು ಆಗಲಿರುವ ಡೇವ್ ಗೋಲ್ಡ್ ಬರ್ಗ್ ನಿಧನಕ್ಕೆ ಮಾರ್ಕ್ ಜುಕರ್ ಬರ್ಗ್ ಸೇರಿದಂತೆ ಸಹಸ್ರಾರು ಗಣ್ಯರಿಂದ ಸಂತಾಪಗಳು ಹರಿದುಬಂದಿವೆ.
ಸಾಮಾಜಿಕ ತಾಣಗಳಲ್ಲೂ ಅಪಾರ ಸಂಖ್ಯೆಯ ಶೋಕಸಂದೇಶಗಳು ಹರಿದು ಬಂದಿವೆ. ಬ್ಲಾಕ್ ಬೆರ್ರಿ ಮೂಲಕ ಇಮೇಲ್ ವಿನಿಮಯ ಮಾಡಿಕೊಳ್ಳುವ ತಂತ್ರಜ್ಞಾನದ ಬಗ್ಗೆ ಮೊದಲ ಬಾರಿಗೆ ಐಡಿಯಾ ನೀಡಿದ್ದೇ ಗೋಲ್ಡ್ ಬರ್ಗ್ ಎಂದು ಬ್ಲಾಕ್ ಬೆರ್ರಿ ಮಾಲೀಕ ಕ್ಲೈಂಟ್ಯಾನ್ಸ್ ಶೋಕಸಂದೇಶದಲ್ಲಿ ಸ್ಮರಿಸಿದ್ದಾರೆ.