ತೂಗುಯ್ಯಾಲೆಯಲ್ಲಿ ಇಂಟರ್‍ನೆಟ್ ಭವಿಷ್ಯ

ಇಂಟರ್‍ನೆಟ್ ಅಳಿವಿನ ಅಂಚನ್ನು ತಲುಪುತ್ತಿದೆಯೇ? ಇನ್ನು ಇಪ್ಪತ್ತು ವರ್ಷಗಳಲ್ಲಿ ಅಂತರ್ಜಾಲ ತನ್ನ ಕಾರ್ಯವನ್ನೇ ಸ್ಥಗಿತಗೊಳಿಸಲಿದೆಯೇ? ಹೀಗೊಂದು ಆತಂಕದ ಮುನ್ಸೂಚನೆಯನ್ನು ವಿಜ್ಞಾನಿಗಳು ಎದುರು ನೋಡುತ್ತಿದ್ದಾರೆ...
ಇಂಟರ್ ನೆಟ್
ಇಂಟರ್ ನೆಟ್

ಲಂಡನ್: ಇಂಟರ್‍ನೆಟ್ ಅಳಿವಿನ ಅಂಚನ್ನು ತಲುಪುತ್ತಿದೆಯೇ? ಇನ್ನು ಇಪ್ಪತ್ತು ವರ್ಷಗಳಲ್ಲಿ ಅಂತರ್ಜಾಲ ತನ್ನ ಕಾರ್ಯವನ್ನೇ ಸ್ಥಗಿತಗೊಳಿಸಲಿದೆಯೇ? ಹೀಗೊಂದು ಆತಂಕದ
ಮುನ್ಸೂಚನೆಯನ್ನು ವಿಜ್ಞಾನಿಗಳು ಎದುರು ನೋಡುತ್ತಿದ್ದಾರೆ.

ಇಂಟರ್‍ನೆಟ್‍ನ ಬಳಕೆ ಮಿತಿ ಮೀರುತ್ತಿದ್ದು, ಶೀಘ್ರದಲ್ಲೇ ತನ್ನ ಸಾಮಥ್ರ್ಯದ ರೇಖೆ ದಾಟಿ ಕುಸಿದು ಬೀಳಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಲ್ಯಾಪ್‍ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್‍ಗಳಿಗೆ ಸಂದೇಶ ರವಾನಿಸುವ ಆಪ್ಟಿಕಲ್ ಫೈಬರ್ ಕೇಬಲ್ ಗಳು ಇನ್ನು ಎಂಟು ವರ್ಷಗಳಲ್ಲಿ ತಮ್ಮ ಗರಿಷ್ಠ ಮಿತಿ ತಲುಪಲಿದ್ದು, ಆನಂತರ ನಿಷ್ಕ್ರಿಯಗೊಳ್ಳಲಿವೆ ಎಂಬ ನಿಖರ ಭವಿಷ್ಯ ನುಡಿದಿರುವ ವಿಜ್ಞಾನಿಗಳು, ಇದೇ ರೀತಿ ಇಂಟರ್‍ನೆಟ್ ಬಳಕೆ ಮುಂದುವರಿದರೆ, ಬರುವ ಇಪ್ಪತ್ತು ವರ್ಷಗಳಲ್ಲಿ ಬ್ರಿಟನ್ ಉತ್ಪಾದಿಸುವ ಸಂಪೂರ್ಣ ವಿದ್ಯುತ್ ಶಕ್ತಿ ಇಂಟರ್ ನೆಟ್ ಪೂರೈಕೆಗೇ ಬೇಕಾಗಬಹುದು ಎಂದಿದ್ದಾರೆ.

ಪ್ರಮುಖ ಇಂಜಿನಿಯರ್‍ಗಳು, ಭೌತಶಾಸ್ತ್ರಜ್ಞರು ಹಾಗೂ ಟೆಲಿಕಾಂ ಕಂಪನಿಗಳು ಈ ಸಂಕಷ್ಟಕ್ಕೊಂದು ಪರಿಹಾರ ಕಂಡುಕೊಳ್ಳಲು ಮೇ 11ರಂದು ಲಂಡನ್‍ನ ರಾಯಲ್ ಸೊಸೈಟಿಯಲ್ಲಿ ಸಭೆ ಸೇರಲಿದ್ದಾರೆ.

  • ಇಂಟರ್‍ನೆಟ್ ವೇಗ ಒಂದು ದಶಕದಲ್ಲಿ 50 ಪಟ್ಟು ಹೆಚ್ಚಳವಾಗಿದೆ.
  • ಆಪ್ಟಿಕಲ್ ಫೈಬರ್‍ಗಳ ಗರಿಷ್ಠ ಸಾಮರ್ಥ್ಯ ತಲುಪಿದ್ದು, ಇನ್ನು ಬೆಳಕು ಪ್ರಸಾರ ಅಸಾಧ್ಯವಾಗಲಿದೆ.
  • ಹೆಚ್ಚು ಕೇಬಲ್‍ಗಳನ್ನು ಹರಿಸುವುದರಿಂದ ಸಮಸ್ಯೆ ಬಗೆಹರಿಸಬಹುದಾದರೂ, ಅದು ಅತ್ಯಂತ ದುಬಾರಿ ವ್ಯವಹಾರವಾಗಲಿದೆ.
  • 2005ರಲ್ಲಿ ಇದ್ದ ಇಂಟರ್‍ನೆಟ್ ಸ್ಪೀಡ್ 2ಎಂಬಿಪಿಎಸ್. ಈಗ ಲಭ್ಯವಿರುವ ಗರಿಷ್ಠ ಸ್ಪೀಡ್ 1002 ಎಂಬಿಪಿಎಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com