ತನ್ನದೇ 'ಮೋಸ್ಟ್ ವಾಂಟೆಡ್' ಫೋಟೋಗೆ ಲೈಕ್ ಕೊಟ್ಟು ಜೈಲು ಸೇರಿದ ಭೂಪ!

ಫೇಸ್ ಬುಕ್ ನಲ್ಲಿ ಕಮೆಂಟ್ ಹಾಗೂ ಲೈಕ್ ಬಂದರೆ ಖುಷಿ ಪಡುವುದನ್ನು ನೋಡಿದ್ದೇವೆ. ಆದರೆ ತನ್ನದೇ ಫೋಟೋಗೆ ಲೈಕ್ ಮಾಡುವ ಮೂಲಕ...
ಫೇಸ್‌ಬುಕ್‌
ಫೇಸ್‌ಬುಕ್‌

ಅಮೆರಿಕ: ಫೇಸ್‌ಬುಕ್‌ನಲ್ಲಿ ಕಮೆಂಟ್ ಹಾಗೂ ಲೈಕ್ ಬಂದರೆ ಖುಷಿ ಪಡುವುದನ್ನು ನೋಡಿದ್ದೇವೆ. ಆದರೆ ತನ್ನದೇ ಫೋಟೋಗೆ ಲೈಕ್ ಮಾಡುವ ಮೂಲಕ ಇಲ್ಲೊಬ್ಬ ವ್ಯಕ್ತಿ ಜೈಲಿಗೆ ಹೋಗಿರುವ ಘಟನೆ ಲಾಸ್ ಏಂಜಲ್ಸ್ ನಲ್ಲಿ ನಡೆದಿದೆ.

ಅಪರಾಧ ಘಟನೆಗಳನ್ನು ತಡೆಯುವ ಸಲುವಾಗಿ ಅಮೆರಿಕ ಪೊಲೀಸರು ಫೇಸ್ ಬುಕ್ ನಲ್ಲಿ ಖಾತೆ ತೆರಿದಿತ್ತು. ಈ ಖಾತೆಯಲ್ಲಿ ಮೋಸ್ಟ್ ವಾಂಟೆಡ್ ಎಂಬ ಶೀರ್ಷಿಕೆಯಡಿಯಲ್ಲಿ ಲೀವಿ ಚಾರ್ಲ್ಸ್ ರಿಯಾರ್ಡಾನ್ ಎಂಬಾತನ ಫೋಟೋ ಹಾಕಿ ಆತನ ಕುಕೃತ್ಯಗಳನ್ನು ವಿವರಿಸಿ ಹೇಳಲಾಗಿತ್ತು.

ಈ ಪೋಸ್ಟ್ ಗೆ ಸ್ವತಃ ಆರೋಪಿಯೇ ಆಗಿದ್ದ ಲೀವಿ ಚಾರ್ಲ್ಸ್ ರಿಯಾರ್ಡಾನ್ ಲೈಕ್ ಹಾಕಿದ್ದನು. ಇದನ್ನು ಗಮನಿಸಿದ ಅಮೆರಿಕ ಪೊಲೀಸರು ಲೀವಿ ಚಾರ್ಲ್ಸ್ ರಿಯಾರ್ಡಾನ್ ಇದ್ದ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಲೀವಿ ಚಾರ್ಲ್ಸ್ ರಿಯಾರ್ಡಾನ್ ಅಮೇರಿಕಾದಲ್ಲಿ ಮೋಸ್ಟ್ ವಾಂಟೆಡ್ ಅಪರಾಧಿಯಾಗಿದ್ದು, ಹಲವು ಚೆಕ್ ಗಳನ್ನು ಕಳವು ಮಾಡಿದ್ದ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com