ಪ್ರೊಫೆಸರ್ ಕೈ ಕತ್ತರಿಸಿದ 10 ಅಪರಾಧಿಗಳಿಗೆ 8 ವರ್ಷ ಕಠಿಣ ಶಿಕ್ಷೆ

2010 ರಲ್ಲಿ ಕೇರಳದ ಕಾಲೇಜಿನ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ....
ಪ್ರೊಫೆಸರ್ ಟಿ.ಜೆ.ಜೋಸೆಫ್
ಪ್ರೊಫೆಸರ್ ಟಿ.ಜೆ.ಜೋಸೆಫ್
Updated on

ಕೊಚ್ಚಿ: 2010 ರಲ್ಲಿ ಕೇರಳದ ಕಾಲೇಜಿನ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 10 ಅಪರಾಧಿಗಳಿಗೆ 8 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಮೂವರಿಗೆ  2 ವರ್ಷಗಳ ಶಿಕ್ಷೆ ವಿಧಿಸಿದೆ.
ಈ ಪ್ರಕರಣ ಸಂಬಂಧ ಒಟ್ಟು 13 ಜನರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಮೇ 8ಕ್ಕೆ ನಿಗದಿಪಡಿಸಿತ್ತು. ರಾಷ್ಟ್ರೀಯ ತನಿಖಾ ತಂಡದ ಕೊರ್ಟ್ ನ ನ್ಯಾಯಾಧೀಶ, ಪಿ ಶಶಿಧರನ್ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.
2010 ಜುಲೈ 4ರ ಭಾನುವಾರದಂದು ಕೇರಳದ ಇಡುಕ್ಕಿಯ ನ್ಯೂ ಮೆನ್ ಕಾಲೇಜಿನ ಪ್ರೊಫೆಸರ್ ಟಿ.ಎನ್ ಜೋಸೆಫ್ ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿ ಕುಟುಂಬ ಸಮೇತ ವಾಪಸ್  ಬರುತ್ತಿದ್ದಾಗ ಪಿಎಫ್ ಐ ಕಾರ್ಯಕರ್ತರು  ಎರ್ನಾಕುಲಂ ಬಳಿಯ ಪ್ರದೇಶವೊಂದರಲ್ಲಿ ಜೋಸೆಫ್ ಅವರ ಬಲ ಕೈ ಕತ್ತರಿಸಿದ್ದರು. ಈ ಸಂಬಂಧ 31 ಮಂದಿಯನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com