ಭೂಸ್ವಾಧೀನ ವಿಧೇಯಕ ಸಂಸದೀಯ ಸಮಿತಿಗೆ?

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಾತ್ವಾಕಾಂಕ್ಷೆಯ ಸರಕು ಮತ್ತು ಸೇವೆಗಳ ತೆರಿಗೆ....
ಸಂಸತ್
ಸಂಸತ್
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಾತ್ವಾಕಾಂಕ್ಷೆಯ  ಸರಕು ಮತ್ತು ಸೇವೆಗಳ ತೆರಿಗೆ ಹಾಗೂ ಭೂಸ್ವಾಧೀನ ತಿದ್ದುಪಡಿ ವಿಧೇಯಕಗಳು ಬಜೆಟ್ ಅಧಿವೇಶನದ ಅನುಮೋದನೆ ಸಿಗುವುದು ಅನುಮಾನ. ಹೀಗಾಗಿ ಸರ್ಕಾರ ಈ ಎರಡೂ ವಿಧೇಯಕಗಳನ್ನು ಸಂಸದೀಯ ಸಮತಿಯ ಪರಿಶೀಲನೆಗೆ ಒಪ್ಪಿಸು ಸಾಧ್ಯತೆಯಿದೆ.
ಜಿಎಸ್ ಟಿ ವಿಧೇಯಕಕ್ಕೆ ಈಗಾಗಲೇ ಲೋಕಸಭೆಯ ಒಪ್ಪಿಗೆ ಸಿಕ್ಕಿದೆ.  ಹಾಗಾಗಿ ಈ ವಿಧೇಯಕವನ್ನು  ರಾಜ್ಯ ಸಭೆಯ ಸಂಸದೀಯ ಸಮಿತಿಗೆ ನೀಡಲು ಸರ್ಕಾರ ಉದ್ದೇಶಿಸಿದೆ. ಇನ್ನು ಭೂ ಸ್ವಾಧೀನ ವಿಧೇಯಕವನ್ನು ಉಭಯ ಸದನಗಳ ಜಂಟಿ ಸಮಿತಿಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ.
ಸಮಿತಿಗೆ ಒಪ್ಪಿಸಲಿ: ಲೋಕಸಭೆಯ ಒಪ್ಪಿಗೆ ಪಡೆದಿರುವ ಜಿಎಸ್ ಟಿ ವಿಧೇಯಕವನ್ನು ಸಂಸದೀಯ ಸಮಿತಿಗೆ ಒಪ್ಪಿಸಬೇಕೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ನಾವು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಲ್ಲ. ಆದರೆ, ಅದಕ್ಕೆ ಅನೇಕ ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ಅದನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com