2ಜಿ ಸ್ಪೆಕ್ಟ್ರಂ: ರಂಜಿತ್ ಸಿನ್ಹಾ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್

2ಜಿ ಸ್ಪೆಕ್ಟ್ರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಹಗರಣ ಕುರಿತಂತೆ ರಂಜಿತ್ ಸಿನ್ಹಾ ಅವರು ಮೊದಲು ತಮ್ಮನ್ನು ತಾವು ತನಿಖೆಗೊಳಪಡಿಸಿಕೊಳ್ಳಬೇಕು ಎಂದು ಹೇಳಿದೆ...
ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ
ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ

ನವದೆಹಲಿ: 2ಜಿ ಸ್ಪೆಕ್ಟ್ರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಹಗರಣ ಕುರಿತಂತೆ ರಂಜಿತ್ ಸಿನ್ಹಾ ಅವರು ಮೊದಲು ತಮ್ಮನ್ನು ತಾವು ತನಿಖೆಗೊಳಪಡಿಸಿಕೊಳ್ಳಬೇಕು ಎಂದು ಹೇಳಿದೆ.

2ಜಿ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ತುಂಬಾ ಹತ್ತಿರದಿಂದ ಗಮನಿಸುತ್ತಿದ್ದು, ತನಿಖೆಯಲ್ಲಿ ಪಾರದರ್ಶಕತೆಯನ್ನು ನ್ಯಾಯಾಲಯ ಬಯಸಿದೆ. ಹಗರಣದ ತನಿಖೆಯಲ್ಲಿ ಹಲವೆಡೆ  ಹಾದಿ ತಪ್ಪಿರುವುದು ಕಂಡಿಬಂದಿದೆ. ಹಗರಣದ ಕುರಿತಂತೆ ರಂಜಿತ್ ಸಿನ್ಹಾ ಅವರು ಈ ವರೆಗೂ ಯಾರು ಯಾರನ್ನು ಭೇಟಿ ಮಾಡಿದ್ದಾರೋ ಅವರೆಲ್ಲರನ್ನು ಸಿವಿಸಿ ಸಂಸ್ಥೆ ತನಿಖೆಗೊಳಪಡಿಸಲಿದೆ ಎಂದು ಹೇಳಿದೆ.

2ಹಗರಣರಕ್ಕೆ ಸಂಬಂಧಿಸಿದಂತೆ ಮಾಡಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಹಗರಣದ ಪ್ರಮುಖ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎನ್ ಜಿಓ ಸಂಸ್ಥೆಯೊಂದು ಆರೋಪ ವ್ಯಕ್ತಪಡಿಸಿತ್ತಲ್ಲದೆ, ಸಿನ್ಹಾ ಅವರನ್ನು ಸಿಬಿಐ ನಿರ್ದೇಶನ ಸ್ಥಾನದಿಂದ ವಜಾಗೊಳಿಸುವಂತೆ ಹಾಗೂ ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡೆಸುವಂತೆ ಮನವಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಎನ್ ಜಿಒ ಪರ ವಕೀಲರಾಗಿದ್ದರು.

2018 ಕಲ್ಲಿದ್ದಲು ನಿಕ್ಷೇಪ ಘಟಕಗಳು ಅಕ್ರಮವಾಗಿದ್ದು, ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದುಪ್ರಶಾಂತ್ ಭೂಶಣ್ ಆರೋಪವ್ಯಕ್ತಪಡಿಸಿದ್ದರು. ಈ ಆರೋಪವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ತನಿಖೆ ವೇಳೆ ರಂಜಿತ್ ಸಿನ್ಹಾ ಅವರ ವಿರುದ್ಧ ವ್ಯಕ್ತವಾಗಿದ್ದ ಆರೋಪ ಸತ್ಯ ಎಂದು ಸುಪ್ರೀಂ ನ್ಯಾಯಾಧೀಶರು ಒಪ್ಪಿದ್ದರು. ಅಲ್ಲದೆ, ರಂಜಿತ್ ಸಿನ್ಹಾ ಅವರನ್ನು ಸಿಬಿಐ ನಿರ್ದೇಶನ ಸ್ಥಾನದಿಂದ ಕೆಳಗಿಳಿಸುವಂತೆ ಹಾಗೂ ರಂಜಿತ್ ಸಿನ್ಹಾ ಅವರನ್ನು ತನಿಖೆಗೊಳಪಡಿಸುವಂತೆ ಸೂಚನೆ ನೀಡಿತ್ತು. ಸುಪ್ರೀಂ ಆದೇಶದಂತೆ ಕಳೆದ ಡಿಸೆಂಬರ್ ನಲ್ಲಿ ರಂಜಿತ್ ಸಿನ್ಹಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com