ತೆಲಂಗಾಣದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಆರಂಭ, 5 ಗ್ರಾಮಕ್ಕೆ ಭೇಟಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ತೆಲಂಗಾಣದಲ್ಲಿ ಪಾದಯಾತ್ರೆ ಆರಂಭಿಸಿದ್ದು, ಅನುವಾದಕರ ನೆರವಿನೊಂದಿಗೆ ಕೋರ್ಟಿಕಲ್....
ರೈತರ ಸಂಕಷ್ಟ ವಿಚಾರಿಸುತ್ತಿರುವ ರಾಹುಲ್ ಗಾಂಧಿ
ರೈತರ ಸಂಕಷ್ಟ ವಿಚಾರಿಸುತ್ತಿರುವ ರಾಹುಲ್ ಗಾಂಧಿ

ಅದಿಲಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ತೆಲಂಗಾಣದಲ್ಲಿ ತಮ್ಮ 15 ಕಿ.ಮೀ ಪಾದಯಾತ್ರೆ ಆರಂಭಿಸಿದ್ದು, ಅನುವಾದಕರ ನೆರವಿನೊಂದಿಗೆ ಕೋರ್ಟಿಕಲ್ ಗ್ರಾಮದ ರೈತರ ಸಂಕಷ್ಟ ವಿಚಾರಿಸುತ್ತಿದ್ದಾರೆ.

ಅದಿಲಾಬಾದ್ ಜಿಲ್ಲೆಯ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ ವೆಲ್ಮಾ ರಾಜೇಶ್ವರ್ ಕುಟುಂಬದ ಸದಸ್ಯರನ್ನು ರಾಹುಲ್ ಭೇಟಿಯಾಗಿ ಮಾತುಕತೆ ನಡೆಸಿದರು.

ಆತ್ಮಹತ್ಯೆಗೆ ಶರಣಾಗಿದ್ದ ಮತ್ತೊಂದು ಕುಟುಂಬವನ್ನು ಇಂದು ರಾಹುಲ್ ಗಾಂಧಿ ಭೇಟಿ ಮಾಡುತ್ತಿದ್ದು, ಪರಿಹಾರವಾಗಿ ನೊಂದ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪಂಜಾಬ್ ಹಾಗೂ ಮಹಾರಾಷ್ಟ್ರದಲ್ಲಿ ಪಾದಯಾತ್ರೆ ಕೈಗೊಂಡು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದ ರಾಹುಲ್ ಗಾಂಧಿ ಇದೀಗ ತೆಲಂಗಾಣದಲ್ಲಿ ಪಾದಯಾತ್ರೆ ಕೈಗೊಂಡಿದ್ದು, ಲಕ್ಷ್ಮಣ ಚಂದಾ, ಪೊಟ್ಟುಪಲ್ಲಿ, ರಾಚಾಪುರ್ ಮತ್ತು ವಾಡಿಯಲ್ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com