ಕಾಬೂಲ್ ದಾಳಿ ಹಿಂದೆ ಪಾಕ್ ಕೈವಾಡ?

ನಾಲ್ವರು ಭಾರತೀಯರನ್ನು ಬಲಿತೆಗೆದುಕೊಂಡ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಅತಿಥಿಗೃಹವೊಂದರ ಮೇಲೆ ಇತ್ತೀಚೆಗೆ ನಡೆದ ದಾಳಿಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನಾಲ್ವರು ಭಾರತೀಯರನ್ನು ಬಲಿತೆಗೆದುಕೊಂಡ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಅತಿಥಿಗೃಹವೊಂದರ ಮೇಲೆ ಇತ್ತೀಚೆಗೆ ನಡೆದ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡದ ಶಂಕೆ ವ್ಯಕ್ತವಾಗಿದೆ.

ಭಾರತೀಯ ರಾಯಭಾರಿ ಅಮರ್ ಸಿನ್ಹಾರನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಉಗ್ರರು ಈ ದಾಳಿ ನಡೆಸಿದ್ದರು ಎಂದು ಆಫ್ಘಾನ್ ಸರ್ಕಾರ ಹೇಳಿಕೊಂಡಿತ್ತು.

ತಾಲಿಬಾನ್ ಉಗ್ರರು ಕೂಡ ತಾವೇ ದಾಳಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಭಾರತದ ಗುಪ್ತಚರ ಸಂಸ್ಥೆಗೆ ಮಾತ್ರ ಈ ದಾಳಿಯ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ಐಎಸ್‍ಐನ ಕೈವಾಡದ ವಾಸನೆ ಬಡಿಯುತ್ತಿದೆ. ಯಾಕೆಂದರೆ ಆಫ್ಘಾನ್‍ನಲ್ಲಿರುವ ಭಾರತೀಯರನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಸಂಚು ರೂಪಿಸಲಾಗುತ್ತಿದೆ ಎಂದು ನಾಲ್ಕು ತಿಂಗಳ ಹಿಂದೆಯೇ ಭಾರತೀಯ ಗುಪ್ತಚರ ಸಂಸ್ಥೆಗೆ ಖಚಿತ ಮಾಹಿತಿ ಸಿಕ್ಕಿತ್ತು.

ಏರ್‍ಇಂಡಿಯಾ ವಿಮಾನವನ್ನು ಅಪಹರಣದ ಸಂಚಿನ ಮಾಹಿತಿಯೂ ಸಿಕ್ಕಿದ್ದ ಹಿನ್ನೆಲೆಯಲ್ಲಿ ಕಾಬೂಲ್ ಏರ್ ಪೋರ್ಟ್‍ನಲ್ಲಿ ಭದ್ರತೆಯನ್ನು ಬಿಗಿಗೊಳಿಸ ಲಾಗಿತ್ತು. ಫೆಬ್ರವರಿಯಲ್ಲಿ ಆಫ್ಘಾನ್‍ಗೆ ವಿಶೇಷ ತಂಡ: ಗುಪ್ತಚರ ಸಂಸ್ಥೆ ಎಚ್ಚರಿಕೆ ಹಿನ್ನೆಲೆಯಲ್ಲಿ ಸರ್ಕಾರ ಫೆಬ್ರವರಿ ತಿಂಗಳಲ್ಲಿ `ರಾ' ಹಾಗೂ ಐಟಿಬಿಪಿ ಅಧಿಕಾರಿಗಳ ತಂಡವೊಂದನ್ನು ಆಫ್ಘಾನ್‍ಗೆ ಕಳುಹಿಸಿಕೊಟ್ಟಿತ್ತು.

ಈ ತಂಡದ ಸೂಚನೆಯಂತೆ ಏರ್‍ಇಂಡಿಯಾ ಕಚೇರಿಯನ್ನು ವಝೀರ್ ಅಕ್ಬರ್ ಖಾನ್ ಬಳಿ ಇರುವ ಭಾರತೀಯ ರಾಯಭಾರಿ ಕಚೇರಿ ಬಳಿ ಸ್ಥಳಾಂತರಿಸಲಾಗಿತ್ತು. ಈ ತಂಡ ಭಾರತೀಯ ರಾಯಭಾರ ಕಚೇರಿ, ಭಾರತದಿಂದ ನಿರ್ಮಿಸುತ್ತಿರುವ ಸಂಸತ್ತು ಕಟ್ಟಡ, ಸಲ್ಮಾ ಡ್ಯಾಂ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಭದ್ರತೆ ಆದರೆ, ಭಾರತೀಯರು ಪದೇ ಪದೆ ಭೇಟಿ ಕೊಡುವ ಅತಿಥಿಗೃಹಗಳ ಭದ್ರತೆ ಪರಿಶೀಲಿಸಿರಲಿಲ್ಲ ಎಂದು ಎಕನಾಮಿಕ್ ಟೈಮ್ಸ್ ವರದಿಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com