ಏಳು ಒಪ್ಪಂದಗಳಿಗೆ ಭಾರತ-ದ.ಕೊರಿಯಾ ಸಹಿ

ದ್ವಿಮುಖ ತೆರಿಗೆ ಪದ್ಧತಿ ರದ್ದು ಸೇರಿದಂತೆ ಏಳು ಪ್ರಮುಖ ಒಪ್ಪಂದಗಳಿಗೆ ಭಾರತ ಹಾಗೂ ದಕ್ಷಿಣ ಕೊರಿಯಾ ಸೋಮವಾರ ಸಹಿ ಹಾಕಿವೆ.
ದಕ್ಷಿಣ ಕೊರಿಯಾ ಅಧ್ಯಕ್ಷರೊಂದಿಗೆ ಮೋದಿ
ದಕ್ಷಿಣ ಕೊರಿಯಾ ಅಧ್ಯಕ್ಷರೊಂದಿಗೆ ಮೋದಿ
Updated on: 

ಸಿಯೋಲ್: ದ್ವಿಮುಖ ತೆರಿಗೆ ಪದ್ಧತಿ ರದ್ದು ಸೇರಿದಂತೆ ಏಳು ಪ್ರಮುಖ ಒಪ್ಪಂದಗಳಿಗೆ ಭಾರತ ಹಾಗೂ ದಕ್ಷಿಣ ಕೊರಿಯಾ ಸೋಮವಾರ ಸಹಿ ಹಾಕಿವೆ.

ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ದಕ್ಷಿಣ ಕೊರಿಯಾಗೆ ಆಗಮಿಸಿದ್ದು, ದ. ಕೊರಿಯಾದ ಅಧ್ಯಕ್ಷ ಪಾರ್ಕ್ ಗೆಯುನ್ ಹೈ ಅವರನ್ನು ಭೇಟಿ ಮಾಡಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಏಳು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಮೋದಿ, ಭಾರತದ ಅಭಿವೃದ್ಧಿಯಲ್ಲಿ ಕೊರಿಯಾ ಪಾತ್ರ ಮಹತ್ವದ್ದು . ಕೊರಿಯಾ ಅಭಿವೃದ್ದಿಯಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು.

ಇದಕ್ಕು ಮುನ್ನ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಕಳೆದ ಒಂದು ವರ್ಷದಲ್ಲಿ ವಿಶ್ವದ ರಾಷ್ಟ್ರಗಳಿಗೆ ಭಾರತದ ಬಗ್ಗೆ ಇದ್ದ ದೃಷ್ಟಿಕೋನ  ಬದಲಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com