ಕಾರ್ಗಿಲ್ ಕದನದಲ್ಲಿ ಪಾಕ್ ನ 2ನೇ ದರ್ಜೆಯ ಪಡೆ ಭಾರತದ ಕುತ್ತಿಗೆ ಹಿಡಿದಿತ್ತು: ಪರ್ವೇಜ್‌ ಮುಷರಫ್‌

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭಾರತದ ಬಗ್ಗೆ ದ್ವೇಷದ ಭಾಷಣ ಮಾಡುತ್ತಿದ್ದಾರೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌

ಇಸ್ಲಾಮಾಬಾದ್: ಭಾರತದೊಂದಿಗೆ  ಉತ್ತಮ ದ್ವಿಪಕ್ಷೀಯ ಸಂಬಂಧ ಬೆಸೆಯಲು ಪಾಕಿಸ್ತಾನ ಹೆಣಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭಾರತದ ಬಗ್ಗೆ  ದ್ವೇಷದ ಭಾಷಣ ಮಾಡುತ್ತಿದ್ದಾರೆ.

ಪಾಕಿಸ್ತಾನದ ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರ್ವೇಜ್‌ ಮುಷರಫ್‌, 1999 ರಲ್ಲಿ ಭಾರತ-ಪಾಕ್ ನಡುವೆ ನಡೆದಿದ್ದ ಕಾರ್ಗಿಲ್ ಯುದ್ಧದ ಬಗ್ಗೆ ಮಾತನಾಡಿದ್ದಾರೆ. "ನಾವು ಮೂರು ತಿಂಗಳು ಯುದ್ಧ ನಡೆಸಿ ಭಾರತದ ಕುತ್ತಿಗೆ ಹಿಡಿದುಕೊಂಡಿದ್ದನ್ನು ಬಹುಶಃ ನವದೆಹಲಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ". ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನದಲ್ಲಿದ್ದ ಎರಡನೇ ದರ್ಜೆಯ ಪಡೆ ಭಾರತದ ಕತ್ತು ಹಿಡಿದಿತ್ತು. ಬಳಿಕ ಆ ಎರಡನೇ ದರ್ಜೆಯ ಪಡೆಗೆ ಪಾಕಿಸ್ತಾನದಲ್ಲಿ ಸೇನೆಯ ಸ್ಥಾನಮಾನ ನೀಡಲಾಯಿತು ಎಂದು ಪರ್ವೇಜ್‌ ಮುಷರಫ್‌ ಹೇಳಿಕೆ ನೀಡಿದ್ದಾರೆ.

ಭಾರತಕ್ಕೆ ತಿಳಿಯದಂತೆಯೇ ಕಾರ್ಗಿಲ್ ನೊಳಗೆ ನಾವು ನಾಲ್ಕು ಕಡೆಗಳಿಂದ ನುಸುಳಿದ್ದೆವು. ಇದನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮುಷರಫ್ ಅಭಿಪ್ರಾಯಪಟ್ಟಿದ್ದಾರೆ.

1999 ರ ಮೇ ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಜಮ್ಮು-ಕಾಶ್ಮೀರದ ಲಡಾಕ್ ಪ್ರಾಂತ್ಯದ ಕಾರ್ಗಿಲ್ ನಲ್ಲಿ ಯುದ್ಧ ನಡೆದಿತ್ತು. ಪಾಕಿಸ್ತಾನದಿಂದ ಸುಮಾರು  1,000 ಕ್ಕೂ ಹೆಚ್ಚು ಅತಿಕ್ರಮಣಕಾರರು ಪಾಕಿಸ್ತಾನದ ನಿಯಂತ್ರಣ ರೇಖೆಯನ್ನು ದಾಟಿ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದರು. ಅಲ್ಲದೇ ಕಾಶ್ಮೀರದಲ್ಲಿರುವ ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಂಡಿದ್ದರು. ಪಾಕಿಸ್ತಾನದ ಸೈನಿಕರನ್ನು ಹೊರದಬ್ಬಿದ್ದ ಭಾರತೀಯ ಸೈನಿಕರು ಕಾರ್ಗಿಲ್ ಯುದ್ಧವನ್ನು ಗೆದ್ದಿದ್ದರು. ಭಾರತಕ್ಕೆ ಅಂದು ಅಕ್ರಮವಾಗಿ ಪ್ರವೇಶಿಸಿದ್ದ ಅತಿಕ್ರಮಣಕಾರರನ್ನು ಪಾಕ್ ನ ಎರಡನೇ ದರ್ಜೆಯ ಪಡೆ ಎಂದು ಮುಷರಫ್ ಹೇಳಿದ್ದು ಅವರಿಗೆ ಸೇನೆಯ ಸ್ಥಾನಮಾನವನ್ನು ನೀಡಿದ್ದಾಗಿ ತಿಳಿಸಿದ್ದಾರೆ.

ಕಾರ್ಗಿಲ್ ಘಟನೆ ಬಗ್ಗೆ 2007ರ ಸೆಪ್ಟೆಂಬರ್ ನಲ್ಲಿ  ಪಶ್ಚಾತ್ತಾಪ ವ್ಯಕ್ತಪಡಿಸಿದ್ದ  ಪಾಕಿಸ್ತಾನದ ಹಾಲಿ ಪ್ರಧಾನಿ ನವಾಜ್ ಷರೀಫ್,  ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಿರಾಶೆ ಮೂಡಿಸಿದ್ದೆ ಎಂದು ಒಪ್ಪಿಕೊಂಡಿದ್ದರು ಅಲ್ಲದೇ ತಮ್ಮ ಗಮನಕ್ಕೆ ಬಾರದೇ ಪಾಕ್ ನ ಎರಡನೇ ದರ್ಜೆಯ ಪಡೆ ಭಾರತದ ಮೇಲೆ ಆಕ್ರಮಣ ಮಾಡಿದ್ದರ ಹಿಂದೆ ಮುಷರಫ್ ಕೈವಾಡ ಇತ್ತೆಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com