

ಬೆಂಗಳೂರು: ದ್ವಿತೀಯ ಪಿಯು ಫಲಿ ತಾಂಶವು ಸೋಮವಾರ ಬೆಳಗ್ಗೆ 11.30ಕ್ಕೆ ಪ್ರಕಟವಾಗಲಿದೆ. 12 ಗಂಟೆ ಬಳಿಕ ಇಲಾಖೆ ಅಧಿಕೃತ ವೆಬ್‍ಸೈಟ್ (www.pue.kar.
nic.in ) ನಲ್ಲಿ ಫಲಿತಾಂಶ ದೊರೆಯುತ್ತದೆ.
ದ್ವಿತೀಯ ಪಿಯು ಫಲಿತಾಂಶವು ಸೋಮವಾರ ಬೆಳಗ್ಗೆ 11.30ಕ್ಕೆ ಪ್ರಕಟವಾಗಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷಮಾ ಗೋಡಬೊಲೆ ಫಲಿತಾಂಶ ಪ್ರಕಟಿಸಲಿದ್ದಾರೆ. 12 ಗಂಟೆ ಬಳಿಕ ಇಲಾಖೆ ಅಧಿಕೃತ ವೆಬ್‍ಸೈಟ್(www.pue.kar.nic.in )ನಲ್ಲಿ ಫಲಿತಾಂಶ ದೊರೆಯಲಿದೆ.. ಮಾರ್ಚ್ ಮೂರನೇ ವಾರದಲ್ಲಿ ನಡೆದ ದ್ವಿತೀಯ ಪಿಯು ಅಂತಿಮ ಪರೀಕ್ಷೆಗೆ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಕಳೆದ ವರ್ಷ ರಾಜ್ಯವಾರು ಫಲಿತಾಂಶದಲ್ಲಿ ಮೊದಲ ಬಾರಿಗೆ ಪಿಯು ವಿದ್ಯಾರ್ಥಿಗಳು ಶೇ.60ರ ಗಡಿ ದಾಟಿದ್ದರು. ನೂತನ ಪಠ್ಯಕ್ರಮ ಅನುಷ್ಠಾನಕ್ಕೆ ಬಂದ ಬಳಿಕದ ಎರಡನೇ ಫಲಿತಾಂಶ ಇದಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಫಲಿತಾಂಶವು ಆಯಾಕಾಲೇಜುಗಳಲ್ಲಿ ಲಭ್ಯವಿರಲಿದೆ.
ಫಲಿತಾಂಶಕ್ಕೆ ಇಲ್ಲಿಗೆ ಭೇಟಿ ನೀಡಿ