ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ: ಸಾಕ್ಷಿಗಳ ಸುಳ್ಳು ಪತ್ತೆ ಪರೀಕ್ಷೆಗೆ ಕೋರ್ಟ್ ಅನುಮತಿ

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ ಸಂಬಂಧ ಮೂರು ಪ್ರಮುಖ ಸಾಕ್ಷಿಗಳ ಸುಳ್ಳು ಪತ್ತೆ ......
ಸುನಂದಾ ಪುಷ್ಕರ್
ಸುನಂದಾ ಪುಷ್ಕರ್

ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ ಸಂಬಂಧ ಮೂರು ಪ್ರಮುಖ ಸಾಕ್ಷಿಗಳ ಸುಳ್ಳು ಪತ್ತೆ ಪರೀಕ್ಷೆಗೆ ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.
ಶಶಿ ತರೂರ್ ನಿಕಟ ವರ್ತಿಗಳು ಎನ್ನಲಾದ ಮೂವರ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡುವಂತೆ ವಿಶೇಷ ತನಿಖಾ ತಂಡ ಮನವಿ ಮಾಡಿತ್ತು. ಹೀಗಾಗಿ ದೆಹಲಿ ಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ.
ತರೂರ್ ಮನೆ ಕೆಲಸದಾತ ನಾರಾಯಣ ಸಿಂಗ್, ಡ್ರೈವರ್, ಭಜರಂಗಿ,  ಮತ್ತು ತರೂರ್ ಸ್ನೇಹಿತ ಸಂಜಯ್ ದೀವಾನ್ ರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯ ಸಮ್ಮತಿಸಿದೆ ಎಂದು ಸುನಂದಾ ಪುಷ್ಕರ್ ಪರ ವಕೀಲ ವಿಕಾಸ್ ಪಾಸ್ವ ಹೇಳಿದ್ದಾರೆ.
ಸುಳ್ಳು ಪತ್ತೆ ಪರೀಕ್ಷೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಮೂವರಿಗೂ ಒಂದೇ ಬಾರಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ಶೀಘ್ರವೇ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಂಸದ ಶಶಿ ತರೂರ್, ಅವರ ಸಿಬ್ಬಂದಿ, ಸ್ನೇಹಿತರು, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹಾಗೂ ಪತ್ರಕರ್ತೆ ನಳಿನಿ ಸಿಂಗ್ ಅವರನ್ನು ಈಗಾಗಲೇ ಪೋಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com