ತ್ರಿರಾಷ್ಟ್ರ ಪ್ರವಾಸ ಅಂತ್ಯ: ಭಾರತಕ್ಕೆ ಬಂದಿಳಿದ ಮೋದಿ

ಪ್ರಧಾನಿ ಮೋದಿ ಅವರ ಮೂರು ದೇಶಗಳ ಆರು ದಿನಗಳ ಪ್ರವಾಸ ಅಂತ್ಯಗೊಂಡಿದ್ದು, ಬುಧವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಿ ಮೋದಿ ಅವರ ಮೂರು ದೇಶಗಳ ಆರು ದಿನಗಳ ಪ್ರವಾಸ ಅಂತ್ಯಗೊಂಡಿದ್ದು, ಬುಧವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದ್ದಾರೆ.

ಪ್ರವಾಸದಲ್ಲಿ ಮೂಲಸೌಲಭ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಮಹತ್ವದ ಒಪ್ಪಂದಗಳಿಗೆ ಮೋದಿ ಸಹಿ ಹಾಕಿದ್ದಾರೆ. ಈ ಮೂಲಕ ಅವರು ಎರಡೂ ದೇಶಗಳ ನಡುವಿನ ಸಂಬಂಧವನ್ನು ಭದ್ರಗೊಳಿಸಿದ್ದಾರೆ. `ದಕ್ಷಿಣ ಕೊರಿಯಾ ಭೇಟಿ ತೃಪ್ತಿಕರವಾಗಿತ್ತು. ಕೊರಿಯಾ ಜನರು ಹಾಗೂ ಸರ್ಕಾರ ನನಗೆ ನೀಡಿದ ಆತಿಥ್ಯಕ್ಕೆ ನನ್ನ ಧನ್ಯವಾದಗಳು' ಎಂದು ದೆಹಲಿಯತ್ತ ಪ್ರಯಾಣ ಆರಂಭಿಸುವ ಮೊದಲು ಮೋದಿ ಟ್ವೀಟ್ ಮಾಡಿದ್ದಾರೆ.

ಕೊರಿಯಾ ಅಧ್ಯಕ್ಷ ಪಾರ್ಕ್ ಗೆಯುನ್- ಹೇಯ್ ಮತ್ತು ಉದ್ಯಮಪ್ರತಿನಿಧಿಗಳ ಜತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ಕೊರಿಯಾ ಮತ್ತು ಭಾರತದ ನಡುವಿನ ಸಹಕಾರವನ್ನು ಬಲಪಡಿಸುವ ನನ್ನ ಭಾವನೆ ಕುರಿತು ಚರ್ಚೆ ನಡೆಸಲಾಯಿತು. ಎರಡೂ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಆಪ್ತವಾಗಲಿದೆ ಮತ್ತು ಇದರಿಂದ ಎರಡೂ ದೇಶಗಳ ಜನರಿಗೆ ಅನುಕೂಲವಾಗಲಿದೆ ಎಂದು ನಾನು ವಿಶ್ವಾಸಪಟ್ಟಿದ್ದೇನೆ ಎಂದು ಮೋದಿ ಇದೇ ವೇಳೆ ಟ್ವೀಟ್ ಮೂಲಕ ಸಾರಿದ್ದಾರೆ.

ಹ್ಯುಂಡಾಯ್ ಘಟಕಕ್ಕೆ ಭೇಟಿ
ಪ್ರಧಾನಿ ಮೋದಿ ಮಂಗಳವಾರ ಹ್ಯುಂಡಾಯ್ ನ ಭಾರಿ ಕೈಗಾರಿಗಳ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿನ ಕೆಲಸ, ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ರಾಜಧಾನಿ ಸಿಯೋಲ್‍ನಿಂದ 400 ಕಿ.ಮೀ. ದೂರದ ಘಟಕಕ್ಕೆ ಭೇಟಿ ನೀಡಿದ ಅವರು, ಭಾರತದ ಜತೆಗೆ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಇನ್ನಷ್ಟು ಸಹ ಭಾಗಿತ್ವದ ವಿಚಾರ ಪ್ರಸ್ತಾಪಿಸಿದರು. ಈ ವೇಳೆ, ನೌಕಾ ರಕ್ಷಣೆ, ಎಲ್ ಎನ್ ಜಿ ಕ್ಯಾರಿಯರ್ ಕನ್ ಸ್ಟ್ರಕ್ಷನ್ ಆ್ಯಂಡ್ ಶಿಪ್ ಬಿಲ್ಡಿಂಗ್ ಟೆಕ್ನಾಲಜಿ ಕ್ಷೇತ್ರದಲ್ಲಿ ಹೆಚ್ಚಿನ ಸಹಭಾಗಿತ್ವಕ್ಕೆಕ ಸಂಬಂಧಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com