ಹಿಜ್ಬುಲ್‌ ಉಗ್ರ ಸಂಘಟನೆ ಮುಖ್ಯಸ್ಥನಿಗೆ ನಿಷೇಧ: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಸ್ತಾವನೆಗೆ ಚೀನಾ ಅಡ್ಡಿ?

ಸೈಯದ್‌ ಸಲಾಲುದ್ದೀನ್‌ ಗೆ ನಿಷೇಧ ವಿಧಿಸುವ ಬಗ್ಗೆ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲಿರುವ ಭಾರತದ ಕ್ರಮಕ್ಕೆ ಚೀನಾ ಅಡ್ಡಿ ಉಂಟುಮಾಡಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ  ಸೈಯದ್‌ ಸಲಾಲುದ್ದೀನ್‌(ಸಂಗ್ರಹ ಚಿತ್ರ)
ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಲುದ್ದೀನ್‌(ಸಂಗ್ರಹ ಚಿತ್ರ)

ಬೀಜಿಂಗ್: ನಿಷೇಧಿತ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಲುದ್ದೀನ್‌ ಗೆ ನಿಷೇಧ ವಿಧಿಸುವ ಬಗ್ಗೆ ವಿಶ್ವಸಂಸ್ಥೆಗೆ  ಮನವಿ ಸಲ್ಲಿಸಲಿರುವ ಭಾರತದ ಕ್ರಮಕ್ಕೆ ಚೀನಾ ಅಡ್ಡಿ ಉಂಟುಮಾಡಲಿದೆ ಎಂಬ ಮಾಹಿತಿ  ಬಹಿರಂಗವಾಗಿದೆ.

ಆಂಗ್ಲ ಅಂತರ್ಜಾಲ ಪತ್ರಿಕೆಯೊಂದರ ವರದಿ ಪ್ರಕಾರ, ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಲುದ್ದೀನ್‌ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ  ನಿರ್ಭಂಧ ವಿಧಿಸುವ ಭಾರತದ ಯತ್ನಕ್ಕೆ ಚೀನಾ ತಾಂತ್ರಿಕವಾಗಿ ತಡೆಯೊಡ್ಡುವ ಸಾಧ್ಯತೆಗಳಿವೆ.  ಪ್ರಧಾನಿ  ನರೇಂದ್ರ ಮೋದಿ ಇತ್ತೀಚೆಗಷ್ಟೇ ಚೀನಾ ಪ್ರವಾಸ ಕೈಗೊಂಡು ಭಯೋತ್ಪಾದನೆ ನಿಗ್ರಹಕ್ಕೆ ಚೀನಾದ ಬೆಂಬಲ ಕೋರಿದ್ದರು  ಅಂತೆಯೇ ಚೀನಾ ಸಹ  ಭಯೋತ್ಪಾದನೆಗೆ ವಿರುದ್ಧ  ಹೋರಾಡಲು ಭಾರತದೊಂದಿಗೆ ಕೈಜೋಡಿಸುವುದಾಗಿ ಘೋಷಿಸಿತ್ತು.  ಆದರೆ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಲುದ್ದೀನ್‌ ಗೆ ನಿಷೇಧ ವಿಧಿಸುವ ವಿಷಯದಲ್ಲಿ ಮಾತ್ರ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಬೆಂಬಲ ನೀಡುವ ಸಾಧ್ಯತೆಗಳ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.  
 ಸಲಾಲುದ್ದೀನ್  ಗೆ ನಿಷೇಧ ವಿಧಿಸುವ ಭಾರತ ಸರ್ಕಾರದ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ 15 ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ, ಚೀನಾ ಭದ್ರತಾ ಮಂಡಳಿಯ ಶಾಹ್ಸ್ವಾತ ಸದಸ್ಯ ರಾಷ್ಟ್ರವಾಗಿರುವುದರಿಂದ, ಭಾರತದ ಪ್ರಸ್ತಾವನೆಗೆ ಚೀನಾ ತಾಂತ್ರಿಕವಾಗಿ ತಡೆಯೊಡ್ಡಿದರೆ ನಿಷೇಧ ವಿಧಿಸುವುದಕ್ಕೆ ಅಡ್ಡಿ ಉಂಟಾಗಲಿದೆ.

ಯು.ಎನ್.ಎಸ್.ಸಿ ಯ ನಿರ್ಣಯ 1267 ರ ಪ್ರಕಾರ ಸೈಯದ್‌ ಸಲಾಲುದ್ದೀನ್‌ ಪ್ರವಾಸ ನಿಷೇಧ ಹಾಗೂ ಆಟ ತನ್ನ ಸ್ವತ್ತುಗಳನ್ನು ಬಳಸದಂತೆ ನಿಷೇಧ ವಿಧಿಸಲು ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ. ಸಲಾಲುದ್ದೀನ್ ಗೆ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆಂಬುದಕ್ಕೆ ಭಾರತ ಮತ್ತಷ್ಟು ಬಲವಾದ ಸಾಕ್ಷಿಗಳನ್ನು ನೀಡಬೇಕು ಎಂದು ಕಾರಣ ನೀಡಿ ಚೀನಾ ಭಾರತದ ಪ್ರಸ್ತಾವನೆಗೆ ತಾಂತ್ರಿಕ ಅಡ್ಡಿ ಉಂಟುಮಾಡಲಿದೆ ಎಂದು ವರದಿಯಾಗಿದೆ. ಭಯೋತ್ಪಾದಕ ಮುಖ್ಯಸ್ಥರನ್ನು ಕಪ್ಪುಪಟ್ಟಿಗೆ ಸೇರಿಸುವ ಸಂಬಂಧ ಭಾರತದ ಹಲವು  ಮನವಿಗಳಿಗೆ ಈಗಾಗಲೇ ಚೀನಾ ಅಡ್ಡಿ ಉಂಟು ಮಾಡಿದೆ.  ಸೈಯದ್‌ ಸಲಾಲುದ್ದೀನ್‌ ನಿಷೇಧಕ್ಕೆ ಸಂಬಂಧಿಸಿದಂತೆ ಭಾರತದ ಪ್ರಸ್ತಾವನೆಗೆ ಬೆಂಬಲಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ಈ ವಿಷಯ ಯು.ಎನ್.ಎಸ್.ಸಿ 1267 ರ ಸಮಿತಿಯ ಆಂಕರಿಕ  ಚರ್ಚೆಗೆ  ಸಂಬಂಧಿಸಿದೆ ಆದ್ದರಿಂದ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದೆ.

ಪಾಕಿಸ್ತಾನವನ್ನು  ತನ್ನ ಸಾರ್ವಕಾಲಿಕ ಮಿತ್ರ ಎಂದು ಬಣ್ಣಿಸಿದ್ದ ಚೀನಾ, ಜಮಾತ್-ಉದ್ ದವ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥರಿಗೆ ನಿಷೇಧ ವಿಧಿಸಲು ಕೋರಿದ್ದ  ಭಾರತದ ಅರ್ಜಿ ಸಂಪೂರ್ಣವಾಗಿಲ್ಲ ಎಂದು ತಾಂತ್ರಿಕ ಅಂಶಗಳ ಕಾರಣ ನೀಡಿ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ  ವಿಳಂಬವಾದರೂ ಭಾರತದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು. ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಲುದ್ದೀನ್‌ ಗೆ  ನಿಷೇಧ ವಿಧಿಸುವ ವಿಷಯದಲ್ಲೂ ಚೀನಾ ಇದೇ ನಿಲುವು ತಳೆಯಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com