ಐಸಿಸ್‍ನ ಪ್ರತಿದಿನದ ಸರಾಸರಿ ಆದಾಯ ರು.63.82ಕೋಟಿ!

ಇಸ್ಲಾಮಿಕ್ ಸ್ಟೇಟ್ (ಐಸಿಸ್) ಆರ್ಥಿಕವಾಗಿ ಬಲಿಷ್ಟವಾಗಿದೆಯೇ? ಉಗ್ರ ಚಟುವಟಿಕೆಗಳಿಂದ ಎಷ್ಟು ಹಣ ಸಂಗ್ರಹ ಸಾಧ್ಯ?..
ಇಸಿಸ್
ಇಸಿಸ್

ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಆರ್ಥಿಕವಾಗಿ ಬಲಿಷ್ಟವಾಗಿದೆಯೇ? ಉಗ್ರ ಚಟುವಟಿಕೆಗಳಿಂದ ಎಷ್ಟು ಹಣ ಸಂಗ್ರಹ ಸಾಧ್ಯ?

ಈ ಪ್ರಶ್ನೆಗಳಿಗೆ ಬೆಚ್ಚಿಬೀಳಿಸುವಂಥ ಉತ್ತರ ಸಿಕ್ಕಿದೆ. ಇಸಿಸ್‍ನ ಪ್ರತಿದಿನದ ಸರಾಸರಿ ಗಳಿಕೆ ರು.63.82 ಕೋಟಿ ಎಂಬ ಸ್ಫೋಟಕ ಮಾಹಿತಿ ನ್ಯೂಯಾರ್ಕ್ ಟೈಮ್ಸ್ ನಿಂದ ಬಹಿರಂಗವಾಗಿದೆ.

ರ್ಯಾಂಡ್ ಕಾರ್ಪೊರೇಷನ್ ಎಂಬ ಖಾಸಗಿ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ 2014ರಲ್ಲಿ ಇಸಿಸ್‍ನ ಒಟ್ಟು ಗಳಿಕೆ ಬರೋಬ್ಬರಿ ರು.7,659ಕೋಟಿ. ಇದೆಲ್ಲ ಗಳಿಕೆಯೂ ಸುಲಿಗೆ ಕೊಲೆ ಅಪಹರಣ ಮತ್ತು ಉಗ್ರಕೃತ್ಯಗಳ ಮೂಲಕವೇ ಮಾಡಿರುವುದು ಎಂಬುದು ಗಮನಿಸಬೇಕಿರುವ ಅಂಶ.

ಕಳೆದ ವರ್ಷದಲ್ಲಿ ರು.3,829ಕೋಟಿ ಸುಲಿಗೆ ಹಾಗೂ ತೆರಿಗೆ ಮೂಲಕ, ರು.3191ಕೋಟಿ ಬ್ಯಾಂಕ್ ದರೋಡೆ ಮೂಲಕ ಒಟ್ಟುಮಾಡಿದ್ದರೆ ತೈಲ ಉತ್ಪನ್ನಗಳ ಮೂಲಕ ಗಳಿಸಿದ್ದು ಕೇವಲ ರು.638 ಕೋಟಿ ಮಾತ್ರ. ಹಾಗಾಗಿ ದೇಶದ ಆರ್ಥಿಕ ಪರಿಸ್ಥಿತಿ, ತೈಲ ರಫ್ತು ಬೆಲೆ ಕುಸಿತಗಳು ಇಸಿಸ್ ಮೇಲೆ ಪರಿಣಾಮ ಬೀರಿಯೇ ಇಲ್ಲ ಎಂದು ರ್ಯಾಂಡ್ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com