ಆಂಧ್ರ ಮತ್ತು ತೆಲಂಗಾಣದಲ್ಲಿ ಉಷ್ಣಗಾಳಿಗೆ 153 ಜನರ ಸಾವು

ಆಂದ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ಉಭಯ ರಾಜ್ಯಗಳಲ್ಲಿ ಉಷ್ಣಗಾಳಿಗೆ 153 ಜನರು ಮೃತಪಟ್ಟಿದ್ದು...
ಉಷ್ಣಗಾಳಿ
ಉಷ್ಣಗಾಳಿ

ಹೈದರಾಬಾದ್: ಆಂದ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ಉಭಯ ರಾಜ್ಯಗಳಲ್ಲಿ ಉಷ್ಣಗಾಳಿಗೆ 153 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 200 ದಾಟುವ ಸಾಧ್ಯತೆಗಳಿವೆ.

ಬಿಸಿಲಿನ ತಾಪಕ್ಕೆ ತೆಲಂಗಾಣದಲ್ಲಿ 73 ಮಂದಿ ಬಲಿಯಾಗಿದ್ದರೆ, ಆಂಧ್ರಪ್ರದೇಶದಲ್ಲಿ 80 ಮಂದಿ ಸಾವನ್ನಪ್ಪಿದ್ದಾರೆ ಎಂದು ಎರಡು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿಲ ತಾಪ ತಡೆಯುವ ಸಾಧನ ಉಪಯೋಗಿಸಿ ಜನರು ಹೊರಗಡೆ ತೆರೆಳಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ದಿನಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪ ಇದ್ದಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಿಸಿಲ ಝಳಕ್ಕೆ ಸಿಕ್ಕವರು ತೆಲಂಗಾಣ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೇ ಬಿಸಿಲ ತಾಪಕ್ಕೆ ಸಿಲುಕಿದವರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳುವಂತೆ ಆಂಧ್ರಪ್ರದೇಶ ಸರ್ಕಾರ ಎಲ್ಲಾ ಜಿಲ್ಲೆಯ ಆಸ್ಪತ್ರೆಗಳಿಗೆ ಸೂಚನೆ ರವಾನಿಸಿದೆ.

ಶುಕ್ರವಾರ ನಲಗೊಂದ, ನಿಜಾಮಾಬಾದ್, ಖಮ್ಮನ್ ಮತ್ತು ರಾಮಗುಂಡಂ ನಗರಗಳಲ್ಲಿ ಪಾದರಸ ೪೭ ಡಿಗ್ರೀ ತಲುಪಿದೆ. ಈ ಹಿಂದೆ ದಾಖಲೆ ಉಷ್ಣಾಂಶ ಕಂಡುಬಂದಿದ್ದು ೧೯೮೪ ರಲ್ಲಿ ರಾಮಗುಂಡಂ ಮತ್ತು ೨೦೦೫ರಲ್ಲಿ ನಿಜಾಮಾಬಾದ್ ನಲ್ಲಿ, ೪೭.೩ ಡಿಗ್ರೀ ಸೆಲ್ಸಿಯಸ್.

ಒಳ್ಳೆಯ ವಿಷಯವೆಂದರೆ ಹೈದರಾಬಾದಿನಲ್ಲಿ ಇನ್ನು ದಾಖಲೆ ಉಷ್ಣಾಂಷಕ್ಕೆ (೪೫.೫ ಡಿಗ್ರಿ) ಏರಿಲ್ಲ. ಈ ಅವಳಿ ನಗರಗಳಲ್ಲಿ ಸದ್ಯಕ್ಕೆ ಉಷ್ಣಾಂಶ ೪೩.೬ಕ್ಕೆ ಏರಿದೆ. ಆದರೆ ಉಷ್ಣ ಗಾಳಿ ಮನೆಯಿಂದ ಜನರು ಹೊರಗೆ ಹೆಚ್ಚು ಹೊತ್ತು ಕಳೆಯುವುದನ್ನು ಅಸಾಧ್ಯವಾಗಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com