ಮೂವರು ಭಯೋತ್ಪಾದಕರ ಆಸ್ತಿ ಸೀಜ್ ಮಾಡಲು ಪಾಕಿಸ್ತಾನಕ್ಕೆ ಸೂಚಿಸಲು ಭಾರತದ ಚಿಂತನೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಉಗ್ರ ಹಫೀಜ್ ಸೈಯ್ಯದ್, ಝಾಕೀವುರ್ ರೆಹಮಾನ್ ಲಖ್ವಿ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ......
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಉಗ್ರ ಹಫೀಜ್ ಸೈಯ್ಯದ್, ಝಾಕೀವುರ್ ರೆಹಮಾನ್ ಲಖ್ವಿ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪಾಕಿಸ್ತಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಭಾರತ ಚಿಂತನೆ ನಡೆಸುತ್ತಿದೆ.
 ದಾವೂದ್ ಇಬ್ರಾಹಿಂ, ಲಷ್ಕರ್ ಇ ತಯ್ಬಾ ಸಂಸ್ಥಾಪಕ ಸೈಯ್ಯದ್ ಹಫೀಜ್, ಹಾಗೂ ಮುಂಬಯಿ ದಾಳಿ ರೂವಾರಿ ಲಖ್ವಿ ಯ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮತಿ ನೀಡಿದೆ.

ಜೊತೆಗೆ ಈ ಪಾತಕಿಗಳ ಆಸ್ತಿ ಸೀಜ್ ಮಾಡುವುದು ಪಾಕಿಸ್ತಾನ ಸರ್ಕಾರದ ಹೊಣೆಗಾರಿಕೆ ಎಂದು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ತಿಳಿಸಿದೆ. ಪಾಕಿಸ್ತಾನದ ಜೊತೆ ಸಂಪರ್ಕದಲ್ಲಿದ್ದು, ಈ ಮೂವರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೇ, ಒಂದು ವೇಳೆ ಇದುವರೆಗೂ ಆಸ್ತಿಯನ್ನು ಸೀಜ್ ಮಾಡದಿದ್ದರೇ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ  ಪಾಕಿಸ್ತಾನ ಕ್ಕೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

1993 ರ ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಪಾಕಿಸ್ತಾನದಲ್ಲೇ ವಾಸಿಸುತ್ತಿದ್ದಾನೆ ಎಂದು ಭಾರತ ಹೇಳಿಕೊಂಡು ಬರುತ್ತಿದ್ದರೂ ಪಾಕಿಸ್ತಾನ ಮಾತ್ರ ನಮ್ಮಲ್ಲಿ ಆತ ಇಲ್ಲ ಎಂದು ವಾದ ಮಾಡುತ್ತಲೇ ಬಂದಿದೆ. ಇನ್ನು ಮೋಸ್ಟ್ ವಾಂಟೆಡ್ ಉಗ್ರರಾದ, ಹಫೀಜ್ ಮತ್ತು ಲಖ್ವಿ ಕೂಡ ಯಾವುದೇ ಭಯವಿಲ್ಲದೇ ಪಾಕಿಸ್ತಾನದಲ್ಲೇ ತಿರುಗಾಡಿಕೊಂಡು ಇದ್ದಾರೆ ಎಂದು ಭಾರತ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com