ಸಿಬಿಎಸ್ಇ ಪಿಯು ಫಲಿತಾಂಶ ಪ್ರಕಟ
ಸಿಬಿಎಸ್ಇ ಪಿಯು ಫಲಿತಾಂಶ ಪ್ರಕಟ

ಸಿಬಿಎಸ್ಇ ಪಿಯು ಫಲಿತಾಂಶ ಪ್ರಕಟ; ಶೇ.82ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

2015ರ ಸಾಲಿನ ಸಿಬಿಎಸ್‌ಇ ಪಠ್ಯಕ್ರಮದ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶೇ.82 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನವದೆಹಲಿ: 2015ರ ಸಾಲಿನ ಸಿಬಿಎಸ್‌ಇ ಪಠ್ಯಕ್ರಮದ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶೇ.82 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬಾರಿ ಫಲಿತಾಂಶ ಬೇಗ ಪ್ರಕಟವಾಗಿದ್ದು,  ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.87.55ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, ಶೇ.77.77ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿದುಬಂದಿದೆ.


ದೆಹಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಎಂ.ಗಾಯತ್ರಿ ಪರೀಕ್ಷೆಯಲ್ಲಿ 496 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿದ್ದಾಳೆ. ಅಲ್ಲದೆ ಮೂರು ವಿಷಯಗಳಲ್ಲಿ ಗಾಯತ್ರಿ 100ಕ್ಕೆ 100 ಅಂಕಗಳಿಗೆ ಮಾಡಿದ್ದಾಳೆ.

ಈ ಬಾರಿ ಸುಮಾರು 10, 40, 368 ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆದಿದ್ದರು. ಇದರಲ್ಲಿ 6,07, 383 ವಿದ್ಯಾರ್ಥಿಗಳು, 4, 32, 985 ವಿದ್ಯಾರ್ಥಿನಿಯರಾಗಿದ್ದರು. ಕಳೆದ ಮಾರ್ಚ್ 2 ರಂದು ಸಿಬಿಎಸ್ ಇ ಪಿಯುಸಿ ಪರೀಕ್ಷೆ ನಡೆದಿತ್ತು.

ಸಿಬಿಎಸ್‌ಇ ಪಿಯು ಫಲಿತಾಂಶಕ್ಕೆ ಈ ವೆಬ್ ಸೈಟ್ ಗೆ ಭೇಟಿ ಕೊಡಿ:
cbse.nic.in, cbseresults.nic.in, results.gov.in

Related Stories

No stories found.

Advertisement

X
Kannada Prabha
www.kannadaprabha.com