ಬಿಸಿ ಝಳಕ್ಕೆ ತೆಲಂಗಾಣ, ಆಂಧ್ರದಲ್ಲಿ ಮರಣ ಮೃದಂಗ: ಮೃತರ ಸಂಖ್ಯೆ 750ಕ್ಕೆ ಏರಿಕೆ

ಬಿಸಿಗಾಳಿಯ ತೀವ್ರತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಅಕ್ಷರಶಃ ತತ್ತರಿಸಿ ಹೋಗಿದೆ...
ಬಿಸಿಗಾಳಿ ಆಂಧ್ರ ತೆಲಂಗಾಣ ತತ್ತರ
ಬಿಸಿಗಾಳಿ ಆಂಧ್ರ ತೆಲಂಗಾಣ ತತ್ತರ

ಹೈದರಾಬಾದ್/ನವದೆಹಲಿ: ಬಿಸಿಗಾಳಿಯ ತೀವ್ರತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಅಕ್ಷರಶಃ ತತ್ತರಿಸಿ ಹೋಗಿದೆ. ಬಿಸಿಲಿನ ತಾಪಕ್ಕೆ 750 ಮಂದಿ ಸಾವನ್ನಪ್ಪಿದ್ದಾರೆ.

ಈ ಎರಡು ರಾಜ್ಯಗಳಲ್ಲಿ ಬಿಸಿಳ ಝಳಕ್ಕೆ ಮೃತಪಟ್ಟವರ ಸಂಖ್ಯೆ 750 ದಾಟಿದ್ದು, ಈ ಬಿಸಿ ಗಾಳಿ ಮತ್ತೆ ಎರಡು ದಿನ ಮುಂದುವರೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ 47 ಡಿ. ಸೆ. ತಾಪಮಾನ ಮುಂದುವರಿದ್ದಿದ್ದು, ತೆಲಂಗಾಣದಲ್ಲಿ ಈವರೆಗೆ 215 ಮಂದಿ, ಆಂಧ್ರದಲ್ಲಿ 551 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ, ಒಡಿಶಾ, ದೆಹಲಿ, ರಾಜಸ್ಥಾನ ಸೇರಿದಂತೆ ದೇಶದ ಹಲವೆಡೆ ಬಿಸಿಲಿನ ಪ್ರಲಾಪ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com