ಎಟಿಎಂನಲ್ಲಿ ಮಹಿಳೆ ಕೊಲೆ: ಪತಿಯೇ ಕೊಲೆಗಾರ

ಎಟಿಎಂನಲ್ಲಿ ಹಣ ಪಡೆಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿಯೇ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣ ಠಾಣೆಯ ತತ್ವಜ್ಞಾನ್ ವಿದ್ಯಾಪೀಠ ಪ್ರದೇಶದಲ್ಲಿ ಸೋಮವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಠಾಣಾ: ಎಟಿಎಂನಲ್ಲಿ ಹಣ ಪಡೆಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿಯೇ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣ ಠಾಣೆಯ ತತ್ವಜ್ಞಾನ್ ವಿದ್ಯಾಪೀಠ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಮೂಲಗಳ ಪ್ರಕಾರ ಆರೋಪಿ ಪ್ರದೀಪ್ ಖಾಸಗಿ ಕಂಪನಿಯೊಂದರ ವಾಹನ ಚಾಲಕನಾಗಿದ್ದು, ಪತ್ನಿ ಪೂಜಾ ಅಕೌಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇಬ್ಬರು ದಂಪತಿಗಳಿಗೆ 10 ವರ್ಷದ ಮಗನಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ದಾಂಪತ್ಯ ಸಾಮರಸ್ಯ ಎದುರಾದ ಕಾರಣ ಇಬ್ಬರು ಪ್ರತ್ಯೇಕವಾಗಿ ಉಳಿದಿದ್ದರು. ಪ್ರತ್ಯೇಕವಾಗಿ ಉಳಿದಿದ್ದ ಪತ್ನಿ ಪೂಜಾ ಮೇಲೆ ಪ್ರದೀಪ್ ಅನುಮಾನವಿತ್ತು ಎಂದು ಹೇಳಲಾಗುತ್ತಿದೆ.

ಪತ್ನಿ ಪೂಜಾಳ ಮೇಲೆ ಪತಿ ಪ್ರದೀಪ್ ಗೆ ಶಂಕೆ ಇದ್ದ ಕಾರಣ ಪ್ರದೀಪ್ ಪ್ರತೀ ನಿತ್ಯ ಪತ್ನಿಯನ್ನು ಹಿಂಬಾಲಿಸುತ್ತಿದ್ದ. ಹೀಗಾಗಿ ಸೋಮವಾರವೂ ಪೂಜಾಳನ್ನು ಹಿಂಬಾಲಿಸಿದ್ದ ಪ್ರದೀಪ್ ಗೆ ಪೂಜಾ ತನ್ನ ಗೆಳೆಯನ ಜತೆ ಎಟಿಎಂ ಒಳಹೋಗುವುದನ್ನು ನೋಡಿದ್ದಾನೆ. ನಂತರ ಇದ್ದಕ್ಕಿದ್ದಂತೆ ಎಟಿಎಂ ಒಳಹೋಗಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ತನ್ನ ಜೇಬಲ್ಲಿದ್ದ ಚಾಕುವನ್ನು ತೆಗೆದುಕೊಂಡು ಪೂಜಾಳಿಗೆ 14 ಬಾರಿ ಇರಿದು ಹತ್ಯೆಮಾಡಿದ್ದಾನೆ. ಘಟನೆಯಲ್ಲಿ ಪೂಜಾಳ ಗೆಳಯನಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com