ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ: ಶೇ.74 ರಷ್ಟು ಭರ್ಜರಿ ಮತದಾನ

ರಾಜ್ಯದ 15 ಜಿಲ್ಲೆಗಳ 3156 ಗ್ರಾಮ ಪಂಚಾಯತಿಗಳಿಲ್ಲಿ ಮೊದಲ ಹಂತದಲ್ಲಿ ಶುಕ್ರವಾರ ಭರ್ಜರಿಯಾಗಿ ಮತದಾನ ಪ್ರಕ್ರಿಯೆ ನಡೆದಿದ್ದು, ರಾಜ್ಯದ್ಯಂತ ಶೇ. 74 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ...
ಮತದಾನದಲ್ಲಿ ಪಾಲ್ಗೊಂಡಿರುವ ಜನತೆ
ಮತದಾನದಲ್ಲಿ ಪಾಲ್ಗೊಂಡಿರುವ ಜನತೆ
Updated on

ಬೆಂಗಳೂರು: ರಾಜ್ಯದ 15 ಜಿಲ್ಲೆಗಳ 3156 ಗ್ರಾಮ ಪಂಚಾಯತಿಗಳಿಲ್ಲಿ ಮೊದಲ ಹಂತದಲ್ಲಿ ಶುಕ್ರವಾರ ಭರ್ಜರಿಯಾಗಿ ಮತದಾನ ಪ್ರಕ್ರಿಯೆ ನಡೆದಿದ್ದು, ರಾಜ್ಯದ್ಯಂತ ಶೇ. 74 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ಜನರು ಸಾಕಷ್ಟು ಉತ್ಸಾಹಭರಿತದಿಂದ ಮತದಾನ ಮಾಡಿದ್ದು, ಗ್ರಾಮೀಣ ಭಾಗದ ಎಲ್ಲಾ ಮತಗಟ್ಟೆಗಳಲ್ಲೂ ಜನಗಳ ಸಾಲುಗಳು ಹೆಚ್ಚಾಗಿ ಕಂಡು ಬಂದಿತ್ತು. ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮ ಪಂಚಾಯ್ದಿಗಳಲ್ಲಿ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಸಂಜೆ 3.30 ಗಂಟೆಯ ನಂತರ ಕೆಲವು ಪ್ರದೇಶಗಲ್ಲಿ ಸಣ್ಣ ಪುಟ್ಟ ಘರ್ಷಣೆಗಳು ಕಂಡು ಬಂದಿತ್ತು.

ಕೆಲವು ಗ್ರಾಮಗಳಲ್ಲಿ ಗುಡುಗು ಮಿಂಚು ಸಮೇತ ಭಾರೀ ಮಳೆ ಸುರಿಯುತ್ತಿದ್ದರೂ ಜನರು ತಮ್ಮ ಉತ್ಸಾಹವನ್ನು ಬಿಡದೆ ಭಾರೀ ಮಳೆಯ ಮಧ್ಯೆಯಲ್ಲೂ ಮತದಾನ ಮಾಡುತ್ತಿರುವುದು ಕಂಡಿಬಂದಿತ್ತು.

ಅಭ್ಯರ್ಥಿಗಳ ಚಿಹ್ನೆ ಬದಲು: ಕೆಲವು ಗ್ರಾಮಗಳಲ್ಲಿ ಮತದಾನ ಮುಂದೂಡಿಕೆ


ಕೆಲವು ಕ್ಷೇತ್ರದ ಮತದಾನ ಕೇಂದ್ರಗಳಲ್ಲಿ ಮತ ಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆಗಳು ಬದಲಾಗಿರುವುದು ಕಂಡು ಬಂದ ಕಾರಣ ಮತದಾನವ್ನು ಮುಂದೂಡಿರುವ ಘಟನೆಗಳು ನಡೆದಿತ್ತು.

ಜೂನ್ 5 ರಂದು ಫಲಿತಾಂಶ


ಒಟ್ಟಾರೆ 43,579 ಸ್ಧಾನಗಳಿಗೆ ಇಂದು ಮತದಾನ ನಡೆದಿದ್ದು, 1, 20,663 ಅಭ್ಯರ್ಥಿಗಳ ಭವಿಷ್ಯ ಜೂನ್ 5 ರಂದು ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟು 3156 ಗ್ರಾಮ ಪಂಚಾಯ್ತಿಗಳಲ್ಲಿ 48621 ಕ್ಷೇತ್ರರಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಆದರೆ, 554 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲದ ಕಾರಣ 4460 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ 28 ಸ್ಥಾನಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

19269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಇವುಗಳಲ್ಲಿ 2946 ಅತಿ ಸೂಕ್ಷ್ಮ, 4218 ಸೂಕ್ಷ್ಮ, 11929 ಸಾಮಾನ್ಯ ಮಟ್ಟದ ಮತಗಟ್ಟೆಗಳೆಂದು ಗುರ್ತಿಸಲಾಗಿದ್ದು, ಈ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆಗೆ ಈಗಾಗಲೇ ಸೂಕ್ತ ರೀತಿಯ ಕ್ರಮ ಕೈಗೊಂಡಿರುವ ಸರ್ಕಾರವು 24 ಪೊಲೀಸ್ ವರಿಷ್ಠಾಧಿಕಾರಿಗಳು, 14 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 91 ಡಿವೈಎಸ್ ಪಿ, 256 ಇನ್ಸ್ ಪೆಕ್ಟರ್, 2267 ಪಿಎಸ್ಐ ಮತ್ತು ಎಎಸ್ಐ, 17500 ಪೊಲೀಸ್ ಸಿಬ್ಬಂದಿ, 9763 ಗೃಹ ರಕ್ಷಕ ದಳವನ್ನು ನೇಮಿಸಲಾಗಿತ್ತು, ಇನ್ನುಳಿದಂತೆ 304 ಕೆ.ಎಸ್.ಆರ್,ಪಿ, ಸಿಎಆರ್, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ವಿವಿಧ ರಾಜ್ಯಗಳಲ್ಲಿ ನಡೆದಿರುವ ಶೇಕಡವಾರು ಮತದಾನ ಪ್ರಮಾಣ

  • ಮಂಗಳೂರು 68.73
  • ಬಂಟ್ವಾಳ 73.40
  • ಬೆಳ್ತಂಗಡಿ 72.89
  • ಪುತ್ತೂರು 75.43
  • ಸುಳ್ಯಾ 77.94
  • ಉಡುಪಿ 70.57
  • ದ.ಕನ್ನಡ 74
  • ಕಾರ್ಕಳ 75.07
  • ಕುಂದಾಪುರ 67

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com