ಬಿಸಿಲಿನ ತಾಪ; 24 ಗಂಟೆಗಳಲ್ಲಿ 202 ಮಂದಿ ಸಾವು!

ರಣ ಬಿಸಿಲಿನ ತಾಪಕ್ಕೆ ತುತ್ತಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 202 ಮಂದಿ ಸಾವನ್ನಪ್ಪಿದ್ದಾರೆ...
ಬಿಸಿಲಿನ ತಾಪ
ಬಿಸಿಲಿನ ತಾಪ
Updated on

ನವದೆಹಲಿ: ರಣ ಬಿಸಿಲಿನ ತಾಪಕ್ಕೆ ತುತ್ತಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 202 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರ, ತೆಲಂಗಾಣ, ಒಡಿಶಾ  ರಾಜ್ಯಗಳಲ್ಲಿ ಬಿಸಿಲಿನ ಬೇಗೆ ಇನ್ನೂ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ   146 ಮಂದಿ ಸಾವಿಗೀಡಾಗಿದ್ದಾರೆ. ತೆಲಂಗಾಣದಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರ  ಪ್ರದೇಶದಲ್ಲಿ ಬಿಸಿಲಿನ ಶಾಖಕ್ಕೆ ಬಲಿಯಾದವರ ಸಂಖ್ಯೆ 1636 ಆಗಿದೆ. ತೆಲಂಗಾಣ-541, ಒಡಿಶಾದಲ್ಲಿ  21 ಮಂದಿ ಮರಣ ಹೊಂದಿದ್ದಾರೆ.

ಶನಿವಾರ ಮಹಾರಾಷ್ಟ್ರದ ನಾಗಪುರದಲ್ಲಿ ಅತಿ ಹೆಚ್ಚು ಉಷ್ಣತೆ 47.1 ಡಿಗ್ರಿ ದಾಖಲಾಗಿದೆ.  ಆಂಧ್ರದ ಕರಾವಳಿಯಲ್ಲಿಯೂ ರಾಯಲ್ ಸೀಮಾ ಪ್ರದೇಶದಲ್ಲಿಯೂ ಈಗ ಅಲ್ಪ ಸ್ವಲ್ಪ ಮಳೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com