ಮಾನ್ಸೂನ್ ಮಳೆ ಸ್ವಲ್ಪ ವಿಳಂಬ, ಜೂನ್ 5ಕ್ಕೆ ಕೇರಳ ಪ್ರವೇಶ

ಮಾನ್ಸೂನ್ ಮಳೆ ಈ ಬಾರಿ ಸ್ವಲ್ಪ ತಡವಾಗಿ ಕೇರಳ ರಾಜ್ಯವನ್ನು ಪ್ರವೇಶ ಮಾಡಲಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಾನ್ಸೂನ್ ಮಳೆ ಈ ಬಾರಿ ಸ್ವಲ್ಪ ತಡವಾಗಿ ಕೇರಳ ರಾಜ್ಯವನ್ನು ಪ್ರವೇಶ ಮಾಡಲಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಾರುತಗಳು ಈ ಬಾರಿ ಐದು ದಿನ ತಡವಾಗಿ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

'ಮುಂಗಾರು ಮಾರುತಗಳು ಬಲಿಷ್ಠವಾಗಿದ್ದು, ಜೂನ್ 5ಕ್ಕೆ ಕೇರಳ ಕರಾವಳಿ ಪ್ರವೇಶಿಸಲಿವೆ' ಎಂದು ಭಾರತದ ಹವಾಮಾನ ಇಲಾಖೆ ನಿರ್ದೇಶಕ ಬಿ.ಪಿ.ಯಾದವ್ ಅವರು ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಮೇ 30ಕ್ಕೆ ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.

ಬೇಸಿಗೆಯಲ್ಲಿ ಸಮಯದಲ್ಲಿ ಸುರಿದಿರುವ ಅಕಾಲಿಕ ಮಳೆ ರೈತರಿಗೆ ನಷ್ಟ ತಂದಿದೆ. ಮಾವು, ಭತ್ತ, ಜೋಳ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಈಗ ಮುಂಗಾರು ಸಹ ವಿಫಲಗೊಂಡರೆ ಆಹಾರ ವಸ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸುಳ್ಳಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com