ಮುಂಬೈ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 8 ಗಂಟೆಯ ಒಳಗೆ `ಪಿಇಪಿ' ಚಿಕಿತ್ಸೆಗೆ ಒಳಗಾದರೆ ಆಕೆ ಎಚ್‍ಐವಿ ಸೋಂಕಿಗೊಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ಆದರೆ ಈ ಜೀವರಕ್ಷಕ ಪಿಇಪಿ (ಪೋಸ್ಟ್ ಎಕ್ಸ್‍ಪೋಷರ್ ಪ್ರಾಫಿಲಾಕ್ಷಿಸ್) ಚಿಕಿತ್ಸೆ ಭಾರತದಲ್ಲಿ ಲಭ್ಯವಿಲ್ಲ ಹಾಗೂ ಇದನ್ನು ಕಡ್ಡಾಯ ಮಾಡಲಾಗಿಲ್ಲ ಎಂದು ಏಡ್ಸ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಾ. ಈಶ್ವರ್ ಗಿಲಾಡ ಹೇಳಿದ್ದಾರೆ. ಇದಕ್ಕೆ ಅರಿವಿನ ಕೊರತೆ ಕಾರಣ. ಅತ್ಯಾಚಾರ ನಡೆದ ಸಂದರ್ಭದಲ್ಲಿ ಕಾನೂನು ನೆರವು, ಚಿಕಿತ್ಸೆಗಳ ಜತೆಗೆ ಪಿಇಪಿ ಚಿಕಿತ್ಸೆಯನ್ನು ಕೊಡಬೇಕು. ಇದು ಎಚ್‍ಐವಿ ಸೋಂಕಿನ ಸಾಧ್ಯತೆಯನ್ನು ನೂರು ಶೇಕಡಾ ಇಲ್ಲವಾಗಿಸುತ್ತದೆ ಎಂದು ಗಿಲಾಡ ಹೇಳಿದ್ದಾರೆ.
ಮುಂಬೈಯಲ್ಲಿ ನಡೆಯುತ್ತಿರುವ ಮೂರು ದಿವಸಗಳ ಪಿಇಪಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದಂಥ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಕೊನೆ ಹಾಡಲು ನಾವು ಯತ್ನಿಸಬೇಕು. ಈ ಚಿಕಿತ್ಸೆಯ ಬಗ್ಗೆ ಎಲ್ಲರಿಗೂ ಗೊತ್ತಿದ್ದರೆ ಸೋಂಕು ನಿವಾರಣೆ ಸುಲಭ. ಇದು ಅಲ್ಪಕಾಲಾವ„ಯ, ಕಡಿಮೆ ಖರ್ಚಿನ, ವೈರಸ್ ನಿರೋಧಕ ಚಿಕಿತ್ಸೆ. ಅತ್ಯಾಚಾರದ ಎಂಟು ಗಂಟೆಯ ಒಳಗೆ ನೀಡಿದರೆ ಫಲಪ್ರದ ಎಂದು ಅವರು ತಿಳಿಸಿದ್ದಾರೆ.
Advertisement