ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಮಹಿಳೆ ರಾಜೀನಾಮೆ

ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಂಶೋಧನ ವಿಶ್ಲೇಷಕಿ ಇದೀಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಬುಧವಾರ ಹೇಳಲಾಗುತ್ತಿದೆ...
ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ (ಸಂಗ್ರಹ ಚಿತ್ರ)
ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ (ಸಂಗ್ರಹ ಚಿತ್ರ)

ನವದೆಹಲಿ: ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಂಶೋಧನ ವಿಶ್ಲೇಷಕಿ ಇದೀಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಬುಧವಾರ ಹೇಳಲಾಗುತ್ತಿದೆ.

ಪಚೌರಿ ವಿರುದ್ಧ ಆರೋಪ ಮಾಡಿದ್ದ ಮಹಿಳಾ ಸಂಶೋಧನ ವಿಶ್ಲೇಷಕಿ ತೇರಿ ಸಂಸ್ಥೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಮಹಿಳೆಯು ತನ್ನ ರಾಜೀನಾಮೆ ಪತ್ರದಲ್ಲಿ, ಅನುಚಿತವಾಗಿ ವರ್ತಿಸುತ್ತಿದ್ದ ಪಚೌರಿಯವರ ತಪ್ಪು ಹುಡುಕುವಲ್ಲಿ ತನಿಖಾ ಸಮಿತಿಯು ವಿಫಲವಾಗಿದೆ. ಸಂಸ್ಥೆ ನನ್ನನ್ನು ಅತೀ ಕೀಳು ಮಟ್ಟದಲ್ಲಿ ನೋಡುತ್ತಿದ್ದು, ಒಬ್ಬ ನೌಕರಳಾಗಿ ನನ್ನ ಹಿತಾಸಕ್ತಿಯನ್ನು ಎತ್ತಿಹಿಡಿಯುವಲ್ಲಿ ತೇರಿ ಸಂಸ್ಥೆ ವಿಫಲವಾಗಿದೆ ಎಂದು ಹೇಳಿದ್ದಾರೆ.     

ಸಂಸ್ಥೆಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿದ್ದರೂ, ಆ ವ್ಯಕ್ತಿಯ ವಿರುದ್ಧ ಸಂಸ್ಥೆ ಈ ವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಂಸ್ಥೆಯಲ್ಲಿ ಇದೀಗ ನನ್ನ ವಿರುದ್ಧ ಶತ್ರುತ್ವ ವಾತಾವರಣ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ತಮ್ಮ ಯಾತನೆಯನ್ನು ತೋಡಿಕೊಂಡಿದ್ದಾರೆ.

ತೇರಿಯ ಮಹಾ ನಿರ್ದೇಶಕರಾಗಿದ್ದ ಪಚೌರಿ ವಿರುದ್ಧ ಈ ವರ್ಷ 2015ರ ಫೆಬ್ರವರಿಯಲ್ಲಿ  ಸಹೋದ್ಯೋಗಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಪಚೌರಿ ವಿರುದ್ಧ ಐಪಿಸಿ ಸೆಕ್ಷನ್.354, 356 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು.

ಬಂಧನಕ್ಕೊಳಪಟ್ಟಿದ್ದ ಪಚೌರಿಗೆ ಅವರು ಶರತ್ತುಬದ್ಧ ನಿಯಮದನ್ವಯ  "ಪೊಲೀಸರು ಕರೆದಾಗೆಲ್ಲ ಹಾಜರಾಗಿ ತನಿಖೆಯಲ್ಲಿ ಸಹಕರಿಸಬೇಕು, ತೇರಿ ಕಾರ್ಯಾಲಯದ ಆವರಣವನ್ನು ಪ್ರವೇಶಿಸಕೂಡದು' ಎಂದು ಹೇಳಿದ್ದ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿತ್ತು. ನಂತರ ಕಳೆದ ಜುಲೈ 23ರಂದು ತೇರಿ ಆಡಳಿತ ಮಂಡಳಿಯು ಪಚೌರಿ ಅವರ ಸ್ಥಾನಕ್ಕೆ ಅಜಯ್‌ಮಾಥುರ್‌ ಅವರನ್ನು ಮಹಾ ನಿರ್ದೇಶಕರನ್ನಾಗಿ ನೇಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com