ಅಮೃತಸರ ಡಿಸಿ ಕಚೇರಿಯಲ್ಲಿ ಅಗ್ನಿ ಅವಘಡ: ಮಹತ್ವದ ದಾಖಲೆ ಭಸ್ಮ

ಅಮೃತಸರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮಹತ್ವದ ದಾಖಲೆಗಳು ಭಸ್ಮವಾಗಿರುವ ಘಟನೆ ಬುಧವಾರ ನಡೆದಿದೆ ಎಂದು ತಿಳಿದುಬಂದಿದೆ...
ಅಮೃತಸರ ಡಿಸಿ ಕಚೇರಿಯಲ್ಲಿ ಅಗ್ನಿ ಅವಘಡ: ಮಹತ್ವದ ದಾಖಲೆ ಭಸ್ಮ (ಸಾಂದರ್ಭಿಕ  ಚಿತ್ರ)
ಅಮೃತಸರ ಡಿಸಿ ಕಚೇರಿಯಲ್ಲಿ ಅಗ್ನಿ ಅವಘಡ: ಮಹತ್ವದ ದಾಖಲೆ ಭಸ್ಮ (ಸಾಂದರ್ಭಿಕ ಚಿತ್ರ)

ಅಮೃತಸರ: ಅಮೃತಸರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮಹತ್ವದ ದಾಖಲೆಗಳು ಭಸ್ಮವಾಗಿರುವ ಘಟನೆ ಬುಧವಾರ ನಡೆದಿದೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ರಿಟೀಷರ ಕಾಲದ ಹಲವು ದಾಖಲೆಗಳು ಹಾಗೂ ಪಾಕಿಸ್ತಾನದ ಲಾಹೋರ್ ಗೆ ಸಂಬಂಧ ಪಟ್ಟ ಮಹತ್ವದ ದಾಖಲೆಗಳಿದ್ದವು ಎಂದು ಹೇಳಲಾಗುತ್ತಿದ್ದು, ಎಲ್ಲಾ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವುದಾಗಿ ವರದಿಗಳಾಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.

ಡಿಸಿ ಕಚೇರಿಯು 1849ರಲ್ಲಿ ಕಟ್ಟಲಾಗಿದ್ದು, ಮೊದಲನೇ ಮಹಡಿಯಲ್ಲಿ ಮಹತ್ವ ದಾಖಲೆಗಳನ್ನಿಡಲಾಗಿತ್ತು. ಕೇಂದ್ರ ಸರ್ಕಾರದ ನಿಯಮದಲ್ಲಿ ಅಮೃತಸರದಲ್ಲಿರುವ ಜಿಲ್ಲಾಡಳಿತ ಕಚೇರಿಯಲ್ಲಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ ಅವರನ್ನು ಶಾಶ್ವತವಾಗಿ ಕಾಪಾಡುವಂತೆ ಹೇಳಲಾಗಿತ್ತು. ಇದರಂತೆ ಕಚೇರಿಯಲ್ಲಿ ಎಲ್ಲಾ ಮಹತ್ವದ ದಾಖಲೆಗಳನ್ನು ಇಡಲಾಗಿತ್ತು. ಇದೀಗ ಕಚೇರಿಗೆ ಬೆಂಕಿ ಅವಘಡ ಸಂಭವಿಸಿರುವುದು ಹಲವು ಮಹತ್ವದ ದಾಖಲೆಗಳು ನಾಶವಾಗಿವೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com