
ಲಾಹೋರ್: ಕಾರ್ಖಾನೆಯೊಂದು ನೆಲಕ್ಕೆ ಕುಸಿದ ಪರಿಣಾಮ ಸ್ಥಳದಲ್ಲಿದ್ದ 18 ಮಂದಿ ಸಾವನ್ನಪ್ಪಿದ್ದು, 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಬುಧವಾರ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಕಾರ್ಖಾನೆಯು ನಾಲ್ಕು ಹಂತದ ಕಟ್ಟಡವಾಗಿದ್ದು, ಹಲವು ಕಾರ್ಮಿಕರು ಕಾರ್ಖಾನೆಯೊಳಗೆ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಾರ್ಖಾನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ 18 ಮಂದಿ ಸಾವನ್ನಪ್ಪಿದ್ದು, 75 ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಅವಶೇಷಗಳಡಿ 150ಕ್ಕೂ ಹೆಚ್ಚು ಮಂದಿ ಸಿಲುಕಿರುವುದಾಗಿ ಹಲವು ಶಂಕೆಗಳು ವ್ಯಕ್ತವಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಖಾನೆ ಕುಸಿತಕ್ಕೆ ಕಾರಣ ಈವರೆಗೂ ತಿಳಿದುಬಂದಿಲ್ಲ.
ಅಪಾಯದಿಂದ ಪಾರಾಗಿರುವ ಕೆಲವು ಕಾರ್ಮಿಕರು ತಮ್ಮ ಸಹ ಕಾರ್ಮಿಕರು ಈಗಾಗಲೇ ಕರೆ ಮಾಡಿದ್ದು, ಮೂರರಿಂದ ನಾಲ್ಕು ಜನ ಕಟ್ಟಡದ ಒಳಗೆ ಸಿಲುಕಿರುವುದಾಗಿ ಹೇಳಿದ್ದಾರೆಂದು ಅಧಿಕಾರಿಗಳಿಗೆ ಹೇಳಿದ್ದಾರೆ.
Advertisement