2010 ಜುಲೈ 5 ರಂದು ನಾಸರ್ ಸೇರಿದಂತೆ ಇತರ ಆರೋಪಿಗಳು ಪ್ರೊಫೆಸರ್. ಟಿಜೆ ಜೋಸೆಫ್ ಮೇಲೆ ಹಲ್ಲೆ ನಡೆಸಿದ್ದರು. ವ್ಯಾನ್‌ನಲ್ಲಿ ಬಂದ ಈ ಗುಂಪು ಇಗರ್ಜಿಗೆ ಹೋಗಿ ಬರುತ್ತಿದ್ದ ಜೋಸೆಫ್ ಅವರ ಕಾರನ್ನು ಮನೆಯ ಪಕ್ಕದಲ್ಲಿ ಅಡ್ಡಗಟ್ಟಿ ಗ್ಲಾಸ್ ಒಡೆದು, ಹೊರಗೆಳೆದು ಹಲ್ಲೆ ನಡೆಸಿದ್ದರು. ಕಾರಿನಲ್ಲಿದ್ದ ಜೋಸೆಫ್ ಅವರ ಅಮ್ಮ ಏಲಿ ಕುಟ್ಟಿ, ಸಹೋದರಿ ಸಿಸ್ಟರ್ ಮೇರಿ ಸ್ಟೆಲ್ಲಾ ಅವರನ್ನು ತಡೆ ಹಿಡಿದು, ಜೋಸೆಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಆಮೇಲೆ ರೋಡಿನಲ್ಲಿ ಮಲಗಿಸಿ ಕೊಡಲಿಯಿಂದ ಅವರ ಕೈ ಕತ್ತರಿಸಲಾಗಿತ್ತು.