ಕೇರಳ ರಾಜಕೀಯದಲ್ಲಿ ಹೊಸ ಶಕೆ: ಗ್ರಾ.ಪ ಚುನಾವಣೆಯಲ್ಲಿ ಖಾಸಗಿ ಕಂಪನಿಗೆ ಜಯ

ಕೇರಳ ರಾಜಕೀಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾರ್ಪೋರೇಟ್ ಸಂಸ್ಥೆಯೊಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ...
ಮತದಾನಕ್ಕಾಗಿ ಕಾದು ನಿಂತಿರುವ ಕೇರಳ ಜನತೆ (ಸಂಗ್ರಹ ಚಿತ್ರ)
ಮತದಾನಕ್ಕಾಗಿ ಕಾದು ನಿಂತಿರುವ ಕೇರಳ ಜನತೆ (ಸಂಗ್ರಹ ಚಿತ್ರ)

ಕೊಚ್ಚಿ: ಕೇರಳ ರಾಜಕೀಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾರ್ಪೋರೇಟ್ ಸಂಸ್ಥೆಯೊಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು  ಸಾಧಿಸಿದೆ.

ಕೇರಳದ ಕಿಜಾಕಂಬಳಂ ಗ್ರಾಮ ಪಂಚಾಯಿತಿಯಲ್ಲಿ ಕೆಟೆಕ್ಸ್ ಸಂಸ್ಥೆ ಅಧಿಕಾರ ಹಿಡಿಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಟ್ವೆಂಟಿ-20 ಹೆಸರಿನಲ್ಲಿ ಒಕ್ಕೂಟ ರಚಿಸಿಕೊಂಡಿದ್ದ  ಎರ್ನಾಕುಲಂ ಮೂಲದ ಕೆಟೆಕ್ಸ್ ಕಂಪನಿ ಗ್ರಾಮ ಪಂಚಾಯಿತಿಯ 19 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಎಡ ಪಕ್ಷಗಳಿಗೆ  ಮಣ್ಣು ಮುಕ್ಕಿಸಿ ಗ್ರಾಮ ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿದೆ.

19 ಸ್ಥಾನಗಳಲ್ಲಿ ಬರೊಬ್ಬರಿ 17 ಸ್ಥಾನಗಳು ಟ್ವೆಂಟಿ-20 ಪಾಲಾದರೆ ಇನ್ನು ಎರಡು ಸ್ಥಾನ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ತಲಾ ಒಂದು ಸ್ಥಾನ ಪಡೆದಿದ್ದಾರೆ. ಇನ್ನು ಎಡ  ಪಕ್ಷಗಳು ಯಾವುದೇ ಸ್ಥಾನ ಪಡೆಯಲು ವಿಫಲವಾಗಿದ್ದು, ಚುನಾವಣೆಯಲ್ಲಿ ತೀವ್ರ ನಿರಾಸೆ ಅನುಭವಿಸಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಟೆಕ್ಸ್ ಕಂಪನಿ ನೇತೃತ್ವದ ಟ್ವೆಂಟಿ-20 458 ಮನೆಗಳು, 600 ಶೌಚಾಲಯ, ಸಾರ್ವಜನಿಕರಿಗೆ ರಸ್ತೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸೆಗೆ  ನೆರವು ಸೇರಿದಂತೆ ಸುಮಾರು 28 ಕೋಟಿ ರುಪಾಯಿ ವೆಚ್ಚದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಈ ಭಾಗದಲ್ಲಿ ಬಾರಿ ಜನಮನ್ನಣೆ  ಪಡೆದಿತ್ತು. ಟ್ವೆಂಟಿ-20ಯ ಮುಖ್ಯ ಸಂಯೋಜಕ ಸಬು ಎಂ.ಜೇಕಬ್ ಮಾರ್ಗದರ್ಶನದಲ್ಲಿ ಮಾಡಿದ ಅಭಿವೃದ್ಧಿಯಿಂದಾಗಿ ಕಾರ್ಪೋರೇಟ್ ವಲಯದ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದ  ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಭಾರಿ ಮುಖಭಂಗವನ್ನು ಉಂಟು ಮಾಡಿದ್ದಾರೆ.

2010ರಲ್ಲಿ ನಡೆದ ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ.84 ರಷ್ಟು ಮತದಾನವಾಗಿತ್ತು, ಈ ಬಾರಿಯ ಚುನಾವಣೆಯಲ್ಲಿ ಶೇ.90.5 ರಷ್ಟು ಮತದಾನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com