ಕೋರ್ಟ್ ಗೆ ಬರಲು 8 ತಿಂಗಳು ಟೈಂ ಬೇಕಂತೆ!

ಕೋರ್ಟ್‍ಗೆ ಹಾಜರಾಗಲು ಕಾಲಾವಕಾಶ ಕೇಳುವುದು ಸರ್ವೇಸಾಮಾನ್ಯ. ಅನಾರೋಗ್ಯ ಕಾರಣವೊಡ್ಡಿ ಗೈರಾಗುವುದೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಅಹಮದಾಬಾದ್: ಕೋರ್ಟ್‍ಗೆ ಹಾಜರಾಗಲು ಕಾಲಾವಕಾಶ ಕೇಳುವುದು ಸರ್ವೇಸಾಮಾನ್ಯ.ಅನಾರೋಗ್ಯ ಕಾರಣವೊಡ್ಡಿ ಗೈರಾಗುವುದೂ ಉಂಟು. ಆದರೆ ಇಷ್ಟೊಂದು ದಿನ ಕಾಲಾವಕಾಶ ಕೇಳೋದು ಹಾಗೂ ಇಂಥ ವಿಚಿತ್ರ ಕಾರಣ ಇರೋದು ಹಿಂದೆಂದಾದರೂ ಕೇಳಿದ್ದೀರಾ? ಕೇಳಿ.

ಜೈನ ಸನ್ಯಾಸಿಯೊಬ್ಬರು ಗುಜರಾತ್ ಹೈಕೋರ್ಟ್‍ಗೆ ವಿಚಾರಣೆಗೆ ಹಾಜರಾಗಲು ಎಂಟು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಕಾರಣ ಅವರು ಕೋಲ್ಕತಾದಿಂದ ಅಹಮದಾಬಾದ್ ಗೆ ನಡೆದು ಬರಲು ಅಷ್ಟು ದಿನ ಬೇಕಾಗುವುದಂತೆ! ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಈ ಸನ್ಯಾಸಿ, ಜೈನ ಪದ್ಧತಿ ಪ್ರಕಾರ ಈ ದೂರ ಕ್ರಮಿಸಲು ಯಾವುದೇ ವಾಹನ ಬಳಸುವಂತಿಲ್ಲ ಎಂದಿದ್ದಾರೆ.

ಬಾಲದೀಕ್ಷ ಪದ್ದತಿಗೆ ಸಂಬಂಧಿಸಿದ ಸರ್ಕಾರಿ ದಾಖಲೆ ತಿದ್ದಿ ನಕಲಿ ಸಹಿ ಮಾಡಿರುವ ಕ್ರಿಮಿನಲ್  ಆರೋಪ ಎದುರಿಸುತ್ತಿರುವ ಆಚಾರ್ಯ ಕೀರ್ತಿ ಯಶುರಿಶ್ವಜಿ ಮಹಾರಾಜ್ ಎಂಬ ಹೆಸರಿನ ಇವರು ಅನಾರೋಗ್ಯ ಕಾರಣವನ್ನೂ ಸೇರಿಸಿ ಈ ಕಾಲಾವಕಾಶ ಕೋರಿದ್ದಾರೆ.

ಸರಾಸರಿ ಪ್ರತಿದಿನ 12 ಕಿಮೀ ನಡೆದರೂ 2200 ಕಿಮೀ ನಡೆಯೋಕೆ 8 ತಿಂಗಳು ಬೇಕೆಂಬುದು ಇವರ ವಿವರಣೆ. ಆದರೆ ಕ್ರಿಮಿನಲ್ ಆರೋಪಿಗೆ ಈ ಥರದ ಕಾರಣಗಳಿಗೆ ರಿಯಾಯಿತಿ ನೀಡಲಾಗುವುದಿಲ್ಲವೆಂದು ಕೋರ್ಟ್ ಕಾಲಾವಕಾಶವನ್ನು ನಿರಾಕರಿಸಿದೆ. ಇಲ್ಲವಾದಲ್ಲಿ ಕಾನೂನು ಪರಿಣಾಮ ಎದುರಿಸಬೇಕಾಗುವುದೆಂದೂ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com